ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು ಖರೀದಿದ HSBC

ಮಂಗಳವಾರ, 14 ಮಾರ್ಚ್ 2023 (12:10 IST)
ಲಂಡನ್ : ಸ್ಟಾರ್ಟ್ಅಪ್ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್ಎಸ್ಬಿಸಿ ಕೇವಲ 1 ಪೌಂಡ್ಗೆ (99.86 ರೂಪಾಯಿ) ಖರೀದಿಸಿದೆ.
 
ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ.

ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್ಎಸ್ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. 

ಬ್ಯಾಂಕ್ನ ಬ್ರಿಟನ್ ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ