ಮಲಗಿದ್ದ ಪತ್ನಿಗೆ ಹಿಗ್ಗಾ ಮುಗ್ಗಾ ಬಾರಿಸಿ ಕೊಂದೇ ಬಿಟ್ಟ ಪತಿ
ಹಿಂದಿನ ರಾತ್ರಿ ಗಂಡ-ಹೆಂಡತಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿತ್ತು. ಇದಾದ ಬಳಿಕ ಗಂಡ ಮನೆಯಿಂದ ಹೊರಹೋಗಿದ್ದ. ಬೆಳಗ್ಗಿನ ಜಾವ ಮರಳಿದಾಗಲೂ ಪತ್ನಿ ಮಲಗಿರುವುದನ್ನು ನೋಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ.
ಸಂತ್ರಸ್ತ ಮಹಿಳೆ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಮೂರು ವರ್ಷಗಳ ಹಿಂದೆ ದಂಪತಿ ವಿವಾಹವಾಗಿದ್ದರು. ಘಟನೆ ಬಳಿಕ ಪತಿ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.