ಮಹಿಳೆಯ ಕೊಂದು ಮೃತದೇಹ ಸುಟ್ಟು ಹಾಕಿದ ಪ್ರಿಯಕರ
20 ವರ್ಷದ ಯುವತಿಯ ಅರೆಬೆಂದ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಇದೇ ವೇಳೆ ಯುವತಿಯ ಪೋಷಕರೂ ಆಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ವಿಚಾರಣೆ ನಡೆಸಿದಾಗ ಯುವತಿ ಕೊಲೆಯಾಗಿರುವುದು ತಿಳಿದುಬಂದಿದೆ. ಇದೀಗ ಕೊಲೆ ಕೃತ್ಯವೆಸಗಿದ ಪ್ರಿಯಕರ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.