ಮಕ್ಕಳು ಅಳು ನಿಲ್ಲಿಸಲಿಲ್ಲ ಎಂದು ಹೀಗೆ ಮಾಡೋದ!
ಧುರ್ಪಾದಬಾಯಿ ಗಣಪತ್ ನಿಮಲ್ವಾಡ್ (30) ಆರೋಪಿ. ಆಕೆಯ ತಾಯಿ ಮತ್ತು ಸಹೋದರ ಮಕ್ಕಳ ಶವಗಳನ್ನು ಸುಡಲು ಸಹಾಯ ಮಾಡಿದರು.
ಮೇ 31 ಮತ್ತು ಜೂನ್ 1 ರಂದು ಸತತ ಎರಡು ದಿನಗಳಲ್ಲಿ ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಹತ್ಯೆಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೇ. 31ರಂದು ಧುರ್ಪಾದಬಾಯಿಯ ನಾಲ್ಕು ತಿಂಗಳ ಮಗಳು ಅನುಸೂಯಾ ತುಂಬಾ ಅಳುತ್ತಿದ್ದಳು. ಇದರಿಂದ ಕೋಪಗೊಂಡ ಧುರ್ಪಾದಬಾಯಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾಳೆ.