ಪತ್ನಿಯ ಕೈ ಕಾಲು ಕಟ್ ಮಾಡಿ ವಿಕೃತಿ ಮೆರೆದ ಪತಿ

ಬುಧವಾರ, 10 ಮಾರ್ಚ್ 2021 (11:16 IST)
ಭೋಪಾಲ್: ಅಕ್ರಮ ಸಂಬಂಧ ಸಂಶಯಿಸಿ ಪತಿ ಮಹಾಶಯನೊಬ್ಬ ಪತ್ನಿಯ ಕೈ ಮತ್ತು ಕಾಲು ಕಟ್ ಮಾಡಿ ವಿಕೃತಿ ಮೆರೆದ ಮಧ್ಯಪ್ರದೇಶದಲ್ಲಿ ಘಟನೆ ನಡೆದಿದೆ.


ಪತ್ನಿ ಫ್ಯಾಕ್ಟರಿಯೊಂದರಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಳು. ಹೀಗಾಗಿ ಆಕೆ ಕೇವಲ ರಜಾ ದಿನಗಳಲ್ಲಿ ಮಾತ್ರ ಮನೆಗೆ ಮರಳುತ್ತಿದ್ದಳು. ಇತ್ತ ಪತಿ ಅಪ್ರಾಪ್ತ ಮಗನೊಂದಿಗೆ ಮನೆಯಲ್ಲಿರುತ್ತಿದ್ದ. ಆತನಿಗೆ ಪತ್ನಿಯ ನಡತೆ ಮೇಲೆ ಸಂಶಯವಿತ್ತು.

ರಜೆಯಲ್ಲಿ ಪತ್ನಿ ಮನೆಗೆ ಬಂದಿದ್ದಾಗ ಕುಡಿದ ಮತ್ತಿನಲ್ಲಿದ್ದ ಆರೋಪಿ ಪತಿ ಆಕೆಯ ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದ. ಇವರ ಗಲಾಟೆ ಕೇಳಿ ನೆರೆಹೊರೆಯವರು ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದೀಗ ಸಂತ್ರಸ್ತೆ ಪತ್ನಿ ತನ್ನ ಪತಿ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ್ದಾಳೆ. ಪತಿಯನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತ ಮಗನನ್ನು ತಮಗೊಪ್ಪಿಸುವಂತೆ ಪತ್ನಿಯ ಮನೆಯವರು ಪೊಲೀಸರ ಮುಂದೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ