ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕೆ ಪತ್ನಿಗೆ ಪತಿ ಹೀಗಾ ಮಾಡೋದು?

ಶನಿವಾರ, 17 ಏಪ್ರಿಲ್ 2021 (09:18 IST)
ಪಟಿಯಾಲ : ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕೆ ಹೆಂಡತಿಯ ಮೇಲೆ ಪತಿ ಆ್ಯಸಿಡ್ ಎರಚಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.

2014ರಲ್ಲಿ ವಿವಾಹವಾದ ದಂಪತಿಗೆ ಇಬ್ಬರು ಹೆಣ‍್ಣು ಮಕ್ಕಳು ಜನಿಸಿದ್ದಾರೆ. ಆದರೆ ಪತ್ನಿ ಗಂಡು ಮಗುವನ್ನು ನೀಡಲಿಲ್ಲ ಎಂದು ಬೇಸರಗೊಂಡಿದ್ದ ವ್ಯಕ್ತಿ ಆಗಾಗ ಮಹಿಳೆಯ ಜೊತೆ ಜಗಳವಾಡುತ್ತಿದ್ದ. ಹೀಗೆ ಇವರಿಬ್ಬರ ನಡುವೆ ಗಂಡು ಮಗುವಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ಕೋಪಗೊಂಡ ಪತಿ ಪತ್ನಿಯ ಮೇಲೆ ಆ್ಯಸಿಡ್ ಎರಚಿದ್ದಾನೆ.  ಇದರಿಂದ ಮಹಿಳೆ 50ರಷ್ಟು ಸುಟ್ಟು ಹೋಗಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಆರೋಪಿ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪೊಲಿಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ