10 ರೂ. ಕಾಯಿನ್ ಗೋಸ್ಕರ ನಡೆಯಿತು ಕೊಲೆ
ಅಹಮ್ಮದ್ ಅಬ್ದುಲ್ ಹಮೀದ್ ಎಂಬಾತ ಅಂಗಡಿ ನಡೆಸುತ್ತಿದ್ದ. ಈತನ ಅಂಗಡಿಗೆ ಬಂದ ಗ್ರಾಹಕ 10 ರೂ. ಕಾಯಿನ್ ಗೋಸ್ಕರ ಹಲ್ಲೆ ನಡೆಸಿದ ಪರಿಣಾಮ ಹಮೀದ್ ಜೀವ ಕಳೆದುಕೊಂಡಿದ್ದಾನೆ.
ಅಂಗಡಿಗೆ ಬಂದ ಆರೋಪಿ 10 ರೂ. ಗಳ ತಂಬಾಕು ಪ್ಯಾಕೆಟ್ ಖರೀದಿ ಮಾಡಿದ್ದ. ಇದಕ್ಕೆ 20 ರೂ. ನೀಡಿದಾಗ ಅಂಗಡಿ ಮಾಲಿಕ ಹಮೀದ್ 10 ರೂ.ಗಳ ಕಾಯಿನ್ ಬಾಕಿ ಚಿಲ್ಲರೆ ನೀಡಿದ್ದ. ಆದರೆ 10 ರೂ. ಕಾಯಿನ್ ಬದಲು ನೋಟು ನೀಡುವಂತೆ ಗ್ರಾಹಕ ತಗಾದೆ ತೆಗೆದ. ಈ ವೇಳೆ ನಡೆದ ವಾಗ್ವಾದ ತಾರಕಕ್ಕೇರಿ ಗ್ರಾಹಕ ಹಮೀದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡಸಿದ್ದು, ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.