ಇಷ್ಟಕ್ಕೆ ವಿರುದ್ಧವಾಗಿ ನೌಕರಿ ಮಾಡಿದ್ದಕ್ಕೆ ಹೆಂಡತಿಯನ್ನು ಥಳಿಸಿ ವಿಡಿಯೋ ಮಾಡಿದ ಪಾಪಿ ಪತಿ
27 ವರ್ಷದ ವ್ಯಕ್ತಿಯನ್ನು ಈ ಸಂಬಂಧ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡುವ ವಿಡಿಯೋವನ್ನು ಪತಿ ಚಿತ್ರೀಕರಿಸಿಕೊಂಡಿದ್ದ. ಈ ವೇಳೆ ತಾನು ಪತ್ನಿ ಕೆಲಸಕ್ಕೆ ಹೋಗುತ್ತಿದ್ದಾಳೆಂದು ಹಲ್ಲೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಕೆಲಸ ಬಿಡುವಂತೆ ಆಕೆಗೆ ಒತ್ತಾಯಿಸುತ್ತಾನೆ. ಕೊನೆಗೆ ಗಂಡನ ಹೊಡೆತ ತಾಳಲಾರದೇ ಹೆಂಡತಿ ಕೆಲಸ ಬಿಡಲು ಒಪ್ಪುತ್ತಾಳೆ.
ಸಾಲ ತೀರಿಸಲು ಪತ್ನಿ ಗಂಡನಿಗೆ ಇಷ್ಟವಿಲ್ಲದೇ ಹೋದರೂ ಕೆಲಸಕ್ಕೆ ಹೋಗಲು ತೀರ್ಮಾನಿಸಿದ್ದಳು. ಇದರಿಂದ ಆತ ಆಕ್ರೋಶಗೊಂಡಿದ್ದ. ತನ್ನ ಹೇಯ ಕೃತ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.