ಹೈದರಾಬಾದ್ ಅತ್ಯಾಚಾರಿಗಳ ಮೃತದೇಹಕ್ಕೆ ಇನ್ನೂ ಸಿಗದ ಮುಕ್ತಿ
ಮಂಗಳವಾರ, 10 ಡಿಸೆಂಬರ್ 2019 (09:15 IST)
ಹೈದರಾಬಾದ್: ದಿಶಾ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರು ಅತ್ಯಾಚಾರಿಗಳು ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವಿಗೀಡಾಗಿ ನಾಲ್ಕು ದಿನ ಕಳೆದರೂ ಅವರ ಮೃತದೇಹಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಎನ್ ಕೌಂಟರ್ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಯುತ್ತಿದ್ದು, ಪ್ರಕರಣ ತೆಲಂಗಾಣ ಹೈಕೋರ್ಟ್ ನಲ್ಲಿದೆ. ಹೀಗಾಗಿ ನಿನ್ನೆ ರಾತ್ರಿಯವರೆಗೆ ಮೃತದೇಹವನ್ನು ಮನೆಯವರ ವಶಕ್ಕೊಪ್ಪಿಸದಂತೆ ಈ ಮೊದಲು ಹೈಕೋರ್ಟ್ ಸೂಚಿಸಿತ್ತು. ಆದರೆ ಇದೀಗ ಮತ್ತೆ ಡಿಸೆಂಬರ್ 13 ರವರೆಗೆ ಮೃತದೇಹವನ್ನು ಸಂರಕ್ಷಿಸಿಡಲು ಹೈಕೋರ್ಟ್ ಸೂಚನೆ ನೀಡಿದೆ.
ಡಿಸೆಂಬರ್ 12 ಕ್ಕೆ ಪ್ರಕರಣ ವಿಚಾರಣೆಯಿದ್ದು, ಅದಾದ ಬಳಿಕವಷ್ಟೇ ಮೃತದೇಹವನ್ನು ಕುಟುಂಬದವರ ವಶಕ್ಕೊಪ್ಪಿಸಲು ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಕೀಚಕರ ದೇಹಕ್ಕೆ ಇನ್ನೂ ಮುಕ್ತಿ ಸಿಗದಂತಾಗಿದೆ.