ದೇಶ ತಪ್ಪು ದಾರಿಗೆ ಸಾಗಲು ನಾನು ಬಿಡೋಲ್ಲ: ಪ್ರಧಾನಿ ಮೋದಿ

ಸೋಮವಾರ, 30 ಮೇ 2016 (14:12 IST)
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 700 ಯೋಜನೆಗಳನ್ನು ಘೋಷಿಸಲಾಗಿದೆ. ಅದರಲ್ಲಿ ಕೆಲ ಯೋಜನೆಗಳ ಇನ್ನೂ ಜಾರಿಗೆ ಬಂದಿಲ್ಲ. ದೇಶ ತಪ್ಪು ದಾರಿಗೆ ಹೋಗಲು ನಾನು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 
ಸರಕಾರದ ಎರಡು ವರ್ಷಗಳ ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು,  ಹಿಂದಿನ ಸರಕಾರ ತನ್ನ ಅಧಿಕಾರವಧಿಯಲ್ಲಿ ಅನೇಕ ಪಾಪಕೃತ್ಯಗಳಲ್ಲಿ ತೊಡಗಿತ್ತು. ಆದರೆ, ನಾನು ಯಾವತ್ತು ಪಾಪ ಕೃತ್ಯಗಳಲ್ಲಿ ತೊಡಗುವುದಿಲ್ಲ ಎಂದು ಘೋಷಿಸಿದ್ದಾರೆ. 
 
ಕೇಂದ್ರ ಸರಕಾರದ ಯೋಜನೆಗಳು ರೈತರಿಗೆ, ಬಡವರಿಗೆ ಲಾಭ ತರುವಂತಹದಾಗಿವೆ. ಮಧ್ಯವರ್ತಿಗಳನ್ನು ದೂರವಿಡಲಾಗಿದೆ. ಸರಕಾರದ ಯೋಜನೆಗಳ ಲಾಭ ಜನರಿಗೆ ನೇರವಾಗಿ ತಲುಪಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
 
ನಾನು ಅಧಿಕಾರವಹಿಸಿಕೊಂಡು ಕೇವಲ ಒಂದು ವಾರದ ನಂತರ ಸರಕಾರದ ಸಾಧನೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸರಕಾರದ ಸಾಧನೆಗಳ ಬಗ್ಗೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದ್ದಾರೆ. ದೇಶದಲ್ಲಿ ಕೆಲವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ, ಜನತೆಯಿಂದ ಆಯ್ಕೆಯಾದ ಸರಕಾರವನ್ನು ನಂಬುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
 
ಕೆಲವರಿಗೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿರುವುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ