ಸತ್ತ ಕುದುರೆ ಮಾತನಾಡಲಾಗದಿದ್ದರೂ ನಾನು ಮಾತನಾಡುತ್ತೇನೆ: ವಾದ್ರಾ ವಾಗ್ವಾದ

ಸೋಮವಾರ, 29 ಆಗಸ್ಟ್ 2016 (10:05 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪೊಲೀಸ್ ಕುದುರೆ ಶಕ್ತಿಮಾನ್ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಗಣೇಶ್ ಜೋಷಿ ಜತೆ ವಾಗ್ವಾದ ನಡೆಸಿದ ಘಟನೆ ಡೆಹ್ರಾಡೂನ್ ವಿಮಾನನಿಲ್ದಾಣದಲ್ಲಿ ನಡೆದಿದೆ.
 
 ಡೆಹ್ರಾಡೂನ್ ವಿಮಾನನಿಲ್ದಾಣದಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಷಿ ಅವರ ಸಹಚರರ ಜತೆ ಕೆಲವು ಬಿಜೆಪಿ ಸಂಸದರನ್ನು ಸ್ವಾಗತಿಸಲು ನಿಂತಿದ್ದರು. ನಾನು ಅವರತ್ತ ಧಾವಿಸಿ ಶಕ್ತಿಮಾನ್ ಸಾವಿನ ಕುರಿತಂತೆ ನನಗೆ ಅನಿಸಿದ್ದನ್ನು ಅವರಿಗೆ ಹೇಳಿದೆ. ಅವರು ಕೂಡಲೇ ಕಿರುಚಾಡಿ, ಕೂಗಾಡಿ, ಬೆದರಿಕೆ ಹಾಕುತ್ತಾ ನನ್ನತ್ತ ಧಾವಿಸಿದರು. ಆಗ ನಾನು ಸತ್ತ ಕುದುರೆ ಮಾತನಾಡಲಾಗದಿದ್ದರೂ ನಾನು ಮಾತನಾಡುತ್ತೇನೆ ಎಂದು ಹೇಳಿದೆ. ಜೋಷಿ ಅವರನ್ನು ಕೂಡಲೇ ವಿಮಾನನಿಲ್ದಾಣದಿಂದ ಅವರ ಗೂಂಡಾಗಳ ಜತೆ ಹೊರದೂಡಿದರು ಎಂದು ವಾದ್ರಾ ವಿವರಿಸಿದರು.

ಇದೇ ಮಾರ್ಚ್‌ ತಿಂಗಳಲ್ಲಿ ಶಕ್ತಿಮಾನ್ ಕುದುರೆಗೆ ಜೋಷಿ ಥಳಿಸಿದ್ದಾರೆಂದು ಆರೋಪಿಸಲಾಗಿತ್ತು.  ಕುದುರೆಯ ಹಿಂದಿನ ಒಂದು ಕಾಲು ಮುರಿದು ಗಾಯಗಳಿಂದಾಗಿ ಅಸುನೀಗಿತ್ತು.
 
 ಶಕ್ತಿಮಾನ್ ಸಾವಿನಿಂದ ರಾಷ್ಟ್ರೀಯ ಆಕ್ರೋಶ ಹೊರಹೊಮ್ಮಿ ಕಾಂಗ್ರೆಸ್ ನಾಯಕರು ಮತ್ತು ಆರೋಪಿತ ಬಿಜೆಪಿ ಶಾಸಕ ಜೋಷಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಕುದುರೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಇದಾದ ಬಳಿಕ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಉದ್ಯಾನವೊಂದಕ್ಕೆ ಶಕ್ತಿಮಾನ್ ಹೆಸರನ್ನು ಇಡುವುದಾಗಿ ಜೋಷಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ