ಪುರುಷರಿಲ್ಲದಿದ್ದರೆ ಮಹಿಳೆಯರಿಗಿಲ್ಲ ಮಸೀದಿ ಪ್ರವೇಶ!

ಶುಕ್ರವಾರ, 25 ನವೆಂಬರ್ 2022 (11:52 IST)
ನವದೆಹಲಿ : ಜಾಮಾ ಮಸೀದಿಗೆ ಮಹಿಳೆ ಒಬ್ಬಳೇ ಅಥವಾ ಮಹಿಳೆಯರ ಗುಂಪು ಪುರುಷರಿಲ್ಲದೇ ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಪುರುಷರು ಜೊತೆಗಿಲ್ಲದೇ ಮಹಿಳೆಯರು ಜಾಮಾ ಮಸೀದಿ ಪ್ರವೇಶ ನಿಷೇಧಿಸಲಾಗಿದೆ ಎಂದು ಜಾಮಾ ಮಸೀದಿ ನೋಟಿಸ್ ಹೊರಡಿಸಿದೆ.

ಕಳೆದ ಕೆಲದಿನಗಳ ಹಿಂದೆ ಈ ಬಗ್ಗೆ ಜಾಮಾ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯನ್ನು ಪ್ರವೇಶ ದ್ವಾರದ ಬಳಿ ಹಾಕಿದೆ.  ಜಾಮಾ ಮಸೀದಿಯ ಈ ಪ್ರಕಟನೆ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ