ಟೊಮೆಟೋ ತಿನ್ನೋದನ್ನೇ ನಿಲ್ಲಿಸಿದ್ರೆ ಬೆಲೆ ಕಡಿಮೆಯಾಗುತ್ತೆ : ಪ್ರತುಭಾ ಶುಕ್ಲಾ

ಸೋಮವಾರ, 24 ಜುಲೈ 2023 (10:42 IST)
ಲಕ್ನೋ : ಟೊಮೆಟೋವನ್ನ ಮನೆಯಲ್ಲಿ ಬೆಳೆಯಿರಿ ಅಥವಾ ತಿನ್ನೋದನ್ನೇ ನಿಲ್ಲಿಸಿ. ಆಗ ಮಾತ್ರ ಬೆಲೆ ಕಡಿಮೆಯಾಗುತ್ತೆ ಎಂದು ಉತ್ತರ ಪ್ರದೇಶದ ಸಚಿವೆ ಪ್ರತುಭಾ ಶುಕ್ಲಾ ಸಲಹೆ ನೀಡಿದ್ದಾರೆ.
 
ಉತ್ತರ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ನಡೆದ ನೆಡುತೋಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ಟೊಮೆಟೋ ದುಬಾರಿಯಾಗಿದ್ದರೆ ಜನರು ಅದನ್ನ ತಮ್ಮ ಮನೆಯಲ್ಲೇ ಬೆಳೆಯಬೇಕು ಅಥವಾ ಟೊಮೆಟೋ ತಿನ್ನೋದನ್ನೇ ನಿಲ್ಲಿಸಬೇಕು.

ಆಗ ಬೆಲೆಗಳು ಅನಿವಾರ್ಯವಾಗಿ ಇಳಿಯುತ್ತವೆ. ಟೊಮೆಟೋ ಬದಲಿಗೆ ನಿಂಬೆ ತಿನ್ನಬಹುದು. ಯಾರೂ ಟೊಮೆಟೋಗಳನ್ನ ತಿನ್ನದೇ ಇದ್ದರೆ ಬೆಲೆ ಕಡಿಮೆಯಾಗುತ್ತದೆ. ಜೊತೆಗೆ ಕುಟುಂಬದ ಆರ್ಥಿಕ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.

ಅಸಾಹಿ ಗ್ರಾಮದಲ್ಲಿ ನ್ಯೂಟ್ರಿಷನ್ ಗಾರ್ಡನ್ ಮಾಡಿದ್ದೇವೆ. ಅದರಲ್ಲಿ ಟೊಮೆಟೋ ಕೂಡ ಬೆಳೆಯಬಹುದು. ಈ ಮೂಲಕ ಬೆಲೆ ಏರಿಕೆ ತಡೆಯಲು ಪರಿಹಾರ ಕಂಡುಕೊಳ್ಳಬಹುದು ಎಂದಿದ್ದಾರೆ.  ಈ ನಡುವೆ ರಾಜ್ಯ ವ್ಯವಹಾರಗಳ ಸಚಿವ ಅಶ್ವಿನಿ ಕುಮಾರ್ ಚೌಬೆ, ಟೊಮೆಟೋ ಸೇರಿದಂತೆ 22 ಅಗತ್ಯ ಆಹಾರ ಪದಾರ್ಥಗಳ ದೈನಂದಿನ ಬೆಲೆಗಳನ್ನ ಮೇಲ್ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ