ತ್ರಿವಳಿ ತಲಾಕ್‌ ನಿಷೇಧಿಸುವುದಿದ್ರೆ ಸತಿ ಸಹಗಮನ ಪದ್ದತಿಯನ್ನು ಜಾರಿಗೊಳಿಸಿ: ಆಜಂಖಾನ್

ಬುಧವಾರ, 19 ಏಪ್ರಿಲ್ 2017 (13:20 IST)
ಕೆಟ್ಟ ಶರಿಯಾ ಸಂಪ್ರದಾಯಗಳಾದ ತ್ರಿವಳಿ ತಲಾಕ್, ನಿಖಾಹ್ ಮತ್ತು ಹಲಾಲಾ ನಿಷೇಧಿಸುವಂತೆ ಹೆಚ್ಚುತ್ತಿರುವ ಕೂಗಿನಿಂದಾಗಿ ಆಕ್ರೋಶಗೊಂಡ ಸಮಾಜವಾದಿ ಪಕ್ಷದ ಮುಖಂಡ ಆಜಂಖಾನ್, ಸತಿ ಸಹಗಮನ ಪದ್ದತಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.
 
ತ್ರಿವಳಿ ತಲಾಕ್ ನಿಷೇಧಿಸುವ ಮುನ್ನ ಹಿಂದೂ ಸಂಪ್ರದಾಯದಲ್ಲಿದ್ದಂತೆ ಪತಿ ಸಾವನ್ನಪ್ಪಿದಲ್ಲಿ ವಿಧವೆ ಪತ್ನಿ ಚಿತೆಗೆ ಹೋಗಿ ಜೀವಂತ ದಹಿಸಿಕೊಳ್ಳುವಂತಹ ಸತಿ ಸಹಗಮನ ಪದ್ದತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.  
 
ತ್ರಿವಳಿ ತಲಾಕ್‌ ನಿಷೇಧಿಸುವ ಕುರಿತಂತೆ ಬೆಂಬಲ ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಮಾಜವಾದಿ ಪಕ್ಷದ ಮುಖಂಡ ಖಾನ್ ಸತಿಪದ್ದತಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
 
ತ್ರಿವಳಿ ತಲಾಕ್‌ ಕುರಿತಂತೆ ಕಾನೂನು ಜಾರಿಗೊಳಿಸಲು ಯಾರು ತಡೆದಿದ್ದಾರೆ? ಹಿಂದೂ ಸಂಪ್ರದಾಯದಲ್ಲಿರುವ ಸತಿ ಪದ್ದತಿಯನ್ನು ಮುಸ್ಲಿಮರು ವಿರೋಧಿಸಿದ್ದಾರಾ? ಎಂದು ಪ್ರಶ್ನಿಸಿದ ಅವರು, ಮೊದಲು ಸತಿಪದ್ದತಿಯನ್ನು ಜಾರಿಗೊಳಿಸಲಿ ಎಂದು ಟಾಂಗ್ ನೀಡಿದ್ದಾರೆ. 
 
ತ್ರಿವಳಿ ತಲಾಕ್ ನಿಷೇಧ ಕುರಿತಂತೆ ಮೌನವಾಗಿರುವವರು ತ್ರಿವಳಿ ತಲಾಕ್ ಆಚರಿಸುವವರಂತೆಯೇ ಸಮಾನ ಅಪರಾಧಿಗಳು ಎಂದು ಸಿಎಂ ಆದಿತ್ಯನಾಥ್ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ