ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಗೆ ತಮಿಳುನಾಡಿನ ದೇವಾಲಯವೊಂದರಲ್ಲಿ ಅರ್ಚಕರಿಂದಲೇ ದೇಗುಲದ ಗರ್ಭಗುಡಿ ಸಮೀಪಕ್ಕೆ ಪ್ರವೇಶ ನೀಡದೇ ಅವಮಾನ ಮಾಡಿದ ಆರೋಪ ಕೇಳಿಬಂದಿದೆ.
ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಶ್ರೀವಿಳ್ಳಿಪುತ್ತೂರು ಅಂಡಾಳ್ ದೇವಾಲಯಕ್ಕೆ ಇಳಯರಾಜ ಕಾರ್ಯಕ್ರಮವೊಂದರ ನಿಮಿತ್ತ ಭೇಟಿ ನೀಡಿದ್ದರು. ಆರಂಭದಲ್ಲಿ ಅವರಿಗೆ ಚೆಂಡೆ, ತಾಳ-ಮೇಳಗಳೊಂದಿಗೆ ಭರ್ಜರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು.
ಆದರೆ ಬಳಿಕ ತಮ್ಮ ಸಂಗಡಿಗರೊಂದಿಗೆ ಇಳಯರಾಜ ದೇವಾಲಯದ ಅರ್ಧಮಂಟಪದ ಬಂದಾಗ ಅರ್ಚಕರು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಇದು ಅಸ್ಪೃಶ್ಯತೆ, ಇಳಯರಾಜರನ್ನು ಅವಮಾನಿಸಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ದೇವಾಲಯದ ಸಿಬ್ಬಂದಿಗಳು ಸ್ಪಷ್ಟನೆ ನೀಡಿದ್ದಾರೆ. ದೇವಾಲಯದ ಗರ್ಭಗುಡಿಯ ಸಮೀಪಕ್ಕೆ ಯಾರಿಗೂ ಪ್ರವೇಶವಿಲ್ಲ. ಇಳಯರಾಜ ಗೊತ್ತಿಲ್ಲದೇ ಅಲ್ಲಿಗೆ ಪ್ರವೇಶ ಮಾಡಲು ಹೊರಟಿದ್ದರು. ಹೀಗಾಗಿ ಅವರನ್ನು ತಡೆಯಲಾಯಿತು. ಹೊರತಾಗಿ ಯಾವುದೇ ಅಸ್ಪೃಶ್ಯತೆಯ ದೃಷ್ಟಿಯಿಂದಲ್ಲ ಎಂದಿದ್ದಾರೆ.
When Ilaiyaraaja entered the sanctum of the Srivilliputhur Andal Temple, the priests and devotees informed him that there were violations in the reception and requested him to exit. Subsequently, Ilaiyaraaja came out of the sanctum and had the opportunity to have a darshan of the… pic.twitter.com/WTiOex5eDX