ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ

ಭಾನುವಾರ, 29 ಮೇ 2022 (15:06 IST)
ನವದೆಹಲಿ : ಕೊರೊನಾದಿಂದಾಗಿ ಎರಡು ವರ್ಷಗಳಿಗೂ ಅಧಿಕ ಕಾಲ ಸ್ಥಗಿತಗೊಂಡಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ರಯಾಣಿಕ ರೈಲು ಸೇವೆಗಳು ಇಂದಿನಿಂದ ಪುನಾರಂಭಗೊಂಡಿದೆ.
 
ಭಾರತ ಮತ್ತು ಬಾಂಗ್ಲಾದೇಶದ ಪ್ರಯಾಣಿಕರ ಅನುಕೂಲಕ್ಕಾಗಿ ಕೋಲ್ಕತ್ತಾ, ಢಾಕಾ, ಕೋಲ್ಕತ್ತಾ ಮೈತ್ರಿ ಎಕ್ಸ್ಪ್ರೆಸ್ ಮತ್ತು ಕೋಲ್ಕತ್ತಾ, ಖುಲ್ನಾ, ಕೋಲ್ಕತ್ತಾ ಬಂಧನ್ ಎಕ್ಸ್ಪ್ರೆಸ್ಗಳು ಇಂದಿನಿಂದ ಸೇವೆಗಳನ್ನು ಪುನಾರಂಭವಾಗಿದೆ ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲಬ್ಯ ಚಕ್ರವರ್ತಿ ತಿಳಿಸಿದರು.

ಈ ಕ್ರಮವು ಭಾರತ ಮತ್ತು ಬಾಂಗ್ಲಾದೇಶ ಎರಡರಲ್ಲೂ ಪ್ರಯಾಣಿಕರ ಅನುಕೂಲಕ್ಕಾಗಿ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಿದೆ. 

ಭಾರತ-ಬಾಂಗ್ಲಾದೇಶಕ್ಕೆ ತಲುಪುವ ಮೂರನೇ ರೈಲು ಸೇವೆಯಾದ ಮಿತಾಲಿ ಎಕ್ಸ್ಪ್ರೆಸ್ ಸೇವೆಯೂ ಜೂನ್ 1ರಂದು ಢಾಕಾದಿಂದ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ