ಕೃಷಿ ಕ್ಷೇತ್ರಕ್ಕೆ ಭಾರತ- ಜರ್ಮನಿ ಒಪ್ಪಂದ!

ಮಂಗಳವಾರ, 3 ಮೇ 2022 (12:53 IST)
ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದ ಮೊದಲನೇ ದಿನವಾದ ಸೋಮವಾರ ಜರ್ಮನಿಯ ರಾಜಧಾನಿ ಬರ್ಲಿನ್ಗೆ ಆಗಮಿಸಿದರು.

ಈ ವೇಳೆ ಅವರಿಗೆ ಭಾರತೀಯ ಸಮುದಾಯ ಮತ್ತು ಜರ್ಮನ್ ಸರ್ಕಾರದ ಪರವಾಗಿ ಅದ್ಧೂರಿ ಸ್ವಾಗತ ನೀಡಲಾಯಿತು. ಅಲ್ಲದೇ ಬರ್ಲಿನ್ನ ಫೆಡೆರಲ್ ಚಾನ್ಸಲರಿಯೆದುರು ‘ಗಾರ್ಡ್ ಆಫ್ ಆನರ್’ ನೀಡಿ ಬರ ಮಾಡಿಕೊಳ್ಳಲಾಯಿತು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸೋಮವಾರ ಜರ್ಮನ್ ರಾಜಧಾನಿ ಬರ್ಲಿನ್ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಬರ್ಲಿನ್ನ ಒಳಾಂಗಣ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಂತೆ ‘2024: ಒನ್ಸ್ ಮೋರ್ ಮೋದಿ’ (2024ರಲ್ಲಿ ಮತ್ತೊಮ್ಮೆ ಮೋದಿ ಎಂದು ಉದ್ಘೋಷ ಮಾಡಿದರು.) ಎಂದು ಜಯಘೋಷ ಮಾಡಿದರು.

ಬಳಿಕ ಮಾತನಾಡಿದ ಮೋದಿ ‘ನಿಮ್ಮನ್ನೆಲ್ಲ ಭೇಟಿಯಾಗಿ ಬಹಳ ಸಂತೋಷವಾಗಿದೆ. ಅದರಲ್ಲೂ ಬಹುತೇಕ ಯುವಕರು ಭಾಗವಹಿಸಿದ್ದನ್ನು ನೋಡಿ ಇನ್ನಷ್ಟು ಸಂತೋಷವಾಗಿದೆ. ಇದು ನನ್ನ ಸೌಭಾಗ್ಯ’ ಎಂದಿದ್ದಾರೆ.

ಹಿಂದೆ ವಿದೇಶಿಯರ ಆಳ್ವಿಕೆಯಿಂದಾಗಿ ದೇಶದ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿತ್ತು. ಆದರೆ ಭಾರತ ಇಂದು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ದೇಶದಲ್ಲಿ ಎಂದಿಗೂ ಸಂಪನ್ಮೂಲಗಳ ಕೊರತೆಯೇ ಇರಲಿಲ್ಲ. ಇದರೊಂದಿಗೆ ರಾಜಕೀಯ ಇಚ್ಛಾಶಕ್ತಿಯು ಸೇರಿ ದೇಶದಲ್ಲಿ ಹೊಸ ಸುಧಾರಣೆಗಳಿದೆ ನಾಂದಿ ಹಾಡಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಸಾಧನೆ ಮಾಡುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ