ಎನ್‌ಡಿಎ ಮೈತ್ರಿಗೆ ಸೆಡ್ಡು ಹೊಡೆಯುವ ರಣತಂತ್ರ ಹೆಣಿತಾ ಐಎನ್‌ಡಿಐಎ

geetha

ಭಾನುವಾರ, 3 ಮಾರ್ಚ್ 2024 (17:27 IST)
ಬಿಹಾರ-ಬಿಹಾರದ ಸಿಎಂ ನಿತೀಶ್ ಇಂಡಿಯಾ ಒಕ್ಕೂಟವನ್ನು ತೊರೆದು, ಎನ್ಡಿಎ ಸೇರಿದ ಬಳಿಕ ಕಾಂಗ್ರೆಸ್ ನೇತೃತ್ವದ ಒಕ್ಕೂಟದಲ್ಲಿ ಬಹುತೇಕ ಅತಂತ್ರದ ಸನ್ನಿವೇಶ ರ‍್ಮಾಣವಾಗಿತ್ತು. ಆ ಕಡೆ ಬಂಗಾಳದಲ್ಲಿ ದೀದಿಯೂ ನೇರವಾಗಿ ಇಂಡಿಯಾ ಒಕ್ಕೂಟದ ಜೊತೆಯ ಮೈತ್ರಿಗೆ ಗುಡ್ಬೈ ಹೇಳಿದ್ದರು.ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಸೀಟು ಬಿಟ್ಟು ಕೊಡಲ್ಲ ಅಂದಿದ್ದ ಅಖಿಲೇಶ್ ಭಿನ್ನರಾಗ ತೆಗೆದಿದ್ದರು... ಡೆಲ್ಲಿಯಲ್ಲೂ ಕೂಡ ಅರವಿಂದ ಕೇಜ್ರಿವಾಲ್ ಏಕಾಂಗಿ ಸ್ಪರ್ಧೆ ಮಾಡ್ತೀವಿ ಅಂತ ಅಂದುಬಿಟ್ಟಿದ್ದರು.
 
ಆದರೆ ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಜೊತೆ ಕೊನೆಗೂ ಕೇಜ್ರಿವಾಲ್ ಡೀಲ್ ಮಾಡಿಕೊಂಡಾಗಿತ್ತು. ಅಖಿಲೇಶ್ ಯಾದವ್ ಕೂಡ ಏಳು ರ‍್ಷಗಳ ಬಳಿಕ ಕಾಂಗ್ರೆಸ್ ಜೊತೆ ಮೈತ್ರಿಗೆ ಓಕೆ ಅಂದಿದ್ದಾಗಿದೆ.ಬಂಗಾಳದಲ್ಲಿ ಲೆಕ್ಕಾಚಾರದ ಸೀಟು ಹಂಚಿಕೆಯ ಹೈಡ್ರಾಮಾಗಳು ನಡೆದು ಹೋಗಿವೆ.... ಅಲ್ಲಿಗೆ ಒಡೆದು ಹೋಳಾಗುವ ಸ್ಥಿತಿಗೆ ಬಂದು ತಲುಪಿದ್ದ ಇಂಡಿಯಾ ಮೈತ್ರಿಯೂ ಮತ್ತೆ ಎದ್ದು ನಿಲ್ಲುವ ಸೂಚನೆಯನ್ನು ಕೊಟ್ಟಿದೆ.

ಮೋದಿಯ ವಿರುದ್ಧ ಇಂಡಿಯಾ ಒಕ್ಕೂಟದಲ್ಲಿ ಚದುರಂಗದಾಟ ನಡೆಯುತ್ತಿದೆ ಅನ್ನೋದು ಬಹುತೇಕ ಕನ್ರ‍್ಮ್ ಆಗಿದೆ. ತಿಂದ ಹೊಡೆತದಿಂದ ರ‍್ಟ್ ಆಗಿರುವ ಇಂಡಿಯಾ ಒಕ್ಕೂಟದ ನಾಯಕರು ಮತ್ತೆ ಲೋಕ ಎಲೆಕ್ಷನ್‌ನಲ್ಲಿ ಪಾರುಪತ್ಯ ಸಾಧಿಸುವ ಚಾಣಾಕ್ಷ ಹೆಜ್ಜೆಯನ್ನು ಇಡ್ತಿದ್ದಾರೆ.ಪೊಲಿಟಿಕಲ್ ಅಜೆಂಡಾಗಳೇ ಹೀಗೆ... ಯಾವಾಗ ಏನಾಗುತ್ತೆ, ಯಾರು ಎಲ್ಲಿ ರ‍್ತಾರೋ, ಎಲ್ಲಿಗೆ ಹೋಗ್ತಾರೋ ಅನ್ನುವ ಸೂಚನೆಯೂ ಸಿಗಲ್ಲ.... ಇಲ್ಲಿದ್ದವರು ಅಲ್ಲಿ ರ‍್ತಾರೆ ಅಲ್ಲಿದ್ದವರು ಇಲ್ಲಿಗೆ ಬಂದು ಬಿಡ್ತಾರೆ.... ಹಾಗೆ ನೋಡಿದ್ರೆ ಇದೇ ಅಲ್ವಾ ಪಾಲಿಟಿಕ್ಸ್
 
ಕಾಂಗ್ರೆಸ್ ನಂಬಿಕೊAಡು ಇರಲ್ಲ, ಅದರ ನಿಲುವುಗಳು ನಮಗೆ ಅಡ್ಜೆಸ್ಟ್ ಆಗಲ್ಲ ಅದಕ್ಕಾಗಿಯೇ ನಾವೂ ನಮ್ಮ ದಾರಿ ನೋಡಿಕೊಳ್ತೀವಿ ಅಂದಿದ್ದರು ಇಂಡಿಯಾ ಕೂಟದ ಒಂದಷ್ಟು ಪ್ರಬಲ ನಾಯಕರುಗಳು.... ಆದರೆ ಈಗ ನೋಡಿ ಮತ್ತೇ ತನ್ನ ವರಸೆಯನ್ನ ಬದಲಾಯಿಸ್ತಿದ್ದಾರೆ.... ಕಾಂಗ್ರೆಸ್ಸೇ ಹೋಗಿ ಅವರನ್ನ ಬೇಡಿಕೊಳ್ತೋ, ಅಥವಾ ಡೀಲ್ ಮಾಡ್ತೊ ಅದು ನಂತರದ ವಿಷಯ... ಬಟ್ ನಿಲುವು ಅದು ಇದು ಅಂದವರು ಸಡನ್ನಾಗಿ ಬದಲಾಗಿ ಮತ್ತೆ ಇಂಡಿಯಾ ಒಕ್ಕೂಟದ ಭಾಗವಾಗೋದಕ್ಕೆ ಮತ್ತೆ ಓಕೆ ಅಂದಿದ್ದಾಗಿದೆ.
 
ಹೌದು... ಇದೀಗ ಕಾಂಗ್ರೆಸ್ ತನ್ನ ಅಸಲಿ ಆಟವನ್ನು ಶುರುಮಾಡಿದೆ... ಆಪ್ ಜೊತೆ ಪಕ್ಕಾ ದೋಸ್ತಿ ಮಾತುಕತೆಯನ್ನು ಆಡಿ ಮುಗಿಸಿದೆ... ಆ ಕಡೆಗೆ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಎಸ್ಪಿ ಜೊತೆ ಏಳು ವರ್ಷಗಳ ಬಳಿಕ ಮೈತ್ರಿಯನ್ನು ಮಾಡಿಕೊಂಡು ಡೀಲ್ ಕುದುರಿಸಿಕೊಂಡಿವೆ.. ಇನ್ನೂ ಬಂಗಾಳದಲ್ಲಿ ಲೆಕ್ಕಾಚಾರದ ಆಟ ಶುರುವಾಗಿದ್ದು, ದೀದಿ ಕೂಡ ಬಹುತೇಕ ಓಕೆ ಅನ್ನಲೇಬೇಕಾದ ಅನಿವರ‍್ಯತೆ ಇದೆ.
 
ಬರೀ ಆತಂರಿಕ ಕಲಹ, ಸಮರ ರ‍್ಷ, ನಿತೀಶ್ ಹೊರಗಡೆ ಹೋಗಿದ್ದು, ಹೀಗೆ ಒಂದಾ ಎರಡಾ ಹೇಳಿ ೨೭ ಪಕ್ಷಗಳನ್ನು ಒಳಗೊಂಡಿದ್ದ ಇಂಡಿಯಾ ಕೂಟದಲ್ಲಿನ ಬಿಕ್ಕಟ್ಟುಗಳು. ಫೈನಲೀ ಅದೇನೇ ಇರಲಿ ಲೋಕಸಭಾ ಎಲೆಕ್ಷನ್ ಹೊತ್ತಲ್ಲೆ ಎಲ್ಲವೂ ಸರಿ ಹೋಗುವ ರ‍್ಭ ಬಂದಿದೆ..... ಕಾಂಗ್ರೆಸ್ಗೂ ಕೂಡ ಹೋದ ಜೀವ ಕೈಗೆ ಬಂದಾAತಾಗಿದೆ.ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಬಿಗಿಗೊಳ್ಳುತ್ತಿದೆ. ಇದೀಗ ದೆಹಲಿ, ರ‍್ಯಾಣ, ಗೋವಾ, ಗುಜರಾತ್ ಸೇರಿದಂತೆ ಕೆಲ ರಾಜ್ಯದಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಮೂಲಕ ಸೀಟು ಹಂಚಿಕೊAಡಿದೆ. ಇಂಡಿಯಾ ಮೈತ್ರಿಯಿಂದ ಒಂದೊAದೆ ಪಕ್ಷಗಳು ಹೊರನಡೆಯುತ್ತಿದೆ ಅನ್ನುವಷ್ಟರಲ್ಲೇ ಇದೀಗ ಮತ್ತೆ ಮೈತ್ರಿ ಗಟ್ಟಿಗೊಳ್ಳುತ್ತಿದೆ. ಆಪ್ ಹಾಗೂ ಕಾಂಗ್ರೆಸ್ ತನ್ನ ಮೈತ್ರಿ ಸೀಟು ಹಂಚಿಕ ಬಹುತೇಕ ಅಂತಿಮಗೊಳಿಸಿದೆ. 
 
ಹೌದು... ಡೆಲ್ಲಿಯ ಸಿಎಂ ಅರವಿಂದ ಕೇಜ್ರಿವಾಲ್ ಸ್ವತಂತ್ರವಾಗಿ ಸ್ರ‍್ಧೆ ಮಾಡ್ತೀವಿ ಅಂತ ಹೇಳಿ ಸಂಚಲನವನ್ನ ಮೂಡಿಸಿದ್ದರು... ಆದರೆ ಮತ್ತೆ ಕಾಂಗ್ರೆಸ್ ಹೂಡಿದ ದಾಳಕ್ಕೆ ಬಂಧಿ ಆಗಿದ್ದಾರೆ.... ಮೈತ್ರಿಯ ಡೀಲ್ಗೆ ಓಕೆ ಅಂದಿದ್ದಾರೆ... ಡೆಲ್ಲಿಯಲ್ಲಿ ೪:೩ ಸೂತ್ರದಡಿಯಲ್ಲಿ ಮೈತ್ರಿ ಡೀಲ್ಗೆ ಆಪ್ ಓಕೆ ಅಂದಿದ್ದು, ಐದು ರಾಜ್ಯಗಳಲ್ಲಿ ಆಪ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ.
 
 
ಅದೇ ರೀತಿಯಾಗಿ ಯುಪಿಯಲ್ಲೂ ಕೂಡ ಕಾಂಗ್ರೆಸ್ ಅಖಿಲೇಶ್ ಯಾದವ್ ಜೊತೆಗೆ ಏಳು ರ‍್ಷಗಳ ಬಳಿಕ ಮೈತ್ರಿ ಮಾಡಿಕೊಂಡಿರೋದ್ರಿAದ ಇಂಡಿಯಾ ಒಕ್ಕೂಟಕ್ಕೆ ಇನ್ನಷ್ಟು ಬಲ ಸಿಕ್ಕಿದೆ.. ಆರಂಭದಲ್ಲಿ ೪೦ ಸೀಟುಗಳ ಬೇಡಿಕೆಯನ್ನು ಇಟ್ಟಿದ್ದ ಕಾಂಗ್ರೆಸ್  ನಿರ್ಧಾರಕ್ಕೆ ಎಸ್ಪಿ ಲೀಡರ್ ಅಖಿಲೇಶ್‌ಯಾದವ್ ಕೆರಳಿ ಕೆಂಡವಾಗಿ ಇಂಡಿಯಾ ಒಕ್ಕೂಟದ ಸಹವಾಸವೇ ಬೇಡ, ಏಕಾಂಗಿಯಾಗಿ ಅಖಾಡಕ್ಕೆ ಇಳಿಯುವ ಮಾತಾನಾಡಿದ್ದರು.
 
ಆದರೆ ಮೈತ್ರಿಯ ಬಳಿಕ ಕಾಂಗ್ರೆಸ್ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಎರಡು ಕಡೆಯಲ್ಲೂ ಎಸ್ಪಿ ಜೊತೆ ಸೀಟು ಹಂಚಿಕೆಯ ಮಾತುಕತೆ ನಡೆಸಿ, ಸೀಟು ಹಂಚಿಕೆಯನ್ನು ಫೈನಲ್ ಮಾಡಿಕೊಂಡಿದೆ... ಉತ್ತರಪ್ರದೇಶದ ೮೦ ಲೋಕಸಭಾ ಕ್ಷೇತ್ರಗಳಲ್ಲಿ ಎಸ್ಪಿ ಮತ್ತು ಮಿತ್ರಪಕ್ಷಗಳು ೬೩ ಸ್ಥಾನಗಳಲ್ಲಿ ಅಖಾಡಕ್ಕೆ ಇಳಿದರೆ, ಕಾಂಗ್ರೆಸ್ಗೆ ೧೭ ಸ್ಥಾನಗಳಲ್ಲಿ ಸ್ರ‍್ಧೆಗೆ ಅವಕಾಶ ಸಿಕ್ತಾ ಇದೆ.... ಅದೇ ರೀತಿಯಾಗಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ೨೮ ಕ್ಷೇತ್ರಗಳು, ಎಸ್ಪಿಗೆ ಒಂದು ಕ್ಷೇತ್ರ ಸಿಕ್ತಾ ಇದೆ.
 
ಉತ್ತರದಲ್ಲಿ ಗೆದ್ದವರಿಗೆ ದೆಹಲಿಯ ಗದ್ದುಗೆ ಸಿಗುತ್ತೆ ಅನ್ನುವ ಮಾತಿದೆ.... ಅದೇ ರೀತಿಯಾಗಿ ಇದೀಗ ಬಿಜೆಪಿಯೂ ಕೂಡ ಕಳೆದ ಬಾರಿಯಂತೆ ಹೆಚ್ಚು ಸ್ಥಾನಗಳನ್ನು ಗೆಲ್ಲೋದಕ್ಕೆ ರಣತಂತ್ರ ರೂಪಿಸುತ್ತಿದೆ.. ಅದಕ್ಕಾಗಿ ರ‍್ಟ್ ಆದ ಕಾಂಗ್ರೆಸ್ ಕೂಡ ಎಸ್ಪಿ ಜೊತೆ ಡೀಲ್ ಮುಗಿಸಿದೆ... ಸ್ವತಃ ಪ್ರೀಯಾಂಕ ಗಾಂಧಿಯೆ ಅಖಿಲೇಶ್ ಜೊತೆ ಮಾತಾಡಿ ಈ ಪಕ್ಕಾ ಡೀಲ್ ಕುದುರಿಸಿದ್ದೇ ಯುಪಿಯಲ್ಲಿ ಏಳು ರ‍್ಷಗಳ ಬಳಿಕ ಎಸ್ಪಿ ಸಖ್ಯ ಕಾಂಗ್ರೆಸ್ಗೆ ಸಿಕ್ಕಾಂತಾಗಿದೆ.
 
ಇನ್ನೂ ಬಂಗಾಳದಲ್ಲಿ ಕೂಡ ಒಟ್ಟು ೪೨ ಲೋಕಸಭಾ ಕ್ಷೇತ್ರಗಳಿವೆ... ಆದ್ರೆ ಕಾಂಗ್ರೆಸ್ ಇಲ್ಲಿ ೧೦ ಸೀಟ್ಗಳ ಬೇಡಿಕೆಯನ್ನ ಇಟ್ಟಿತ್ತು.... ಆದರೆ ದೀದಿ ಮಾತ್ರ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ... ಮೌನ ಮುರಿದು ಆಕ್ರೋಶವನ್ನ ಹೊರ ಹಾಕಿ ಏಕಾಂಗಿ ಆಗಿ ಸ್ಪರ್ಧೆಗೆ ಇಳಿಯುವ ಮನಸ್ಸು ಮಾಡಿದ್ದರು. 
 
ಆದರೆ ಈಗ ಮತ್ತೇ ರಾಹುಲ್ ಗಾಂದಿಯೆ ಮಮತಾ ಜೊತೆ ಮಾತಾಡಿ ಸೀಟು ಹಂಚಿಕೆಯ ವಿಚಾರವಾಗಿ ಹೊಸ ಡೀಲ್ಗೆ ಮುಂದಾಗಲಿದ್ದಾರೆ ಅಂತ ಹೇಳಲಾಗ್ತಿದೆ.. ಇನ್ನೂ ಮಹಾರಾಷ್ಟçದಲ್ಲೂ ಕೂಡ ೪೮ ಕ್ಷೇತ್ಗಳಿವೆ ಇಲ್ಲಿಯೂ ಕೂಡ ರಾಹುಲ್ ಗಾಂಧಿಯೇ ನೇರವಾಗಿ ಉದ್ಧವ್ ಠಾಕ್ರೆ ಬಳಿ ಮಾತುಕತೆ ಮೂಲಕ ಸರಿಪಡಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.ಒಟ್ಟಿನಲ್ಲಿ ಛಿದ್ರವಾಗುವ ಆತಂಕದಲ್ಲಿದ್ದ ಇಂಡಿಯಾ ಕೂಟ ಮತ್ತೆ ಪುಟಿದೇಳುವ ಸೂಚನೆಯನ್ನು ಕೊಟ್ಟಾಗಿದೆ... ಮೋದಿ ಸೈನ್ಯವನ್ನು ಸೋಲಿಸಲು ಅಕ್ಷರಶಃ ಸಿದ್ದವಾಗಿ ಅಖಾಡಕ್ಕೆ ಇಳಿಯುತ್ತಿದೆ ಅನ್ನೋದು ಪಕ್ಕಾ ಆಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ