ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಂತಿಮ ಟೆಸ್ಟ್ ಗೆದ್ದರೆ ಇತಿಹಾಸ

Krishnaveni K

ಶುಕ್ರವಾರ, 1 ಮಾರ್ಚ್ 2024 (14:19 IST)
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಅದು ಇತಿಹಾಸವಾಗಲಿದೆ. ಅದು ಏನೆಂದು ತಿಳಿಯಲು ಇದನ್ನು ಓದಿ.

ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕು ಟೆಸ್ಟ್ ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದೆ. ಭಾರತ ಮೊದಲ ಟೆಸ್ಟ್ ಸೋತಿದ್ದು ಬಿಟ್ಟರೆ ಉಳಿದೆಲ್ಲಾ ಮೂರೂ ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿ ತನ್ನದಾಗಿಸಿಕೊಂಡಿದೆ. ಹೀಗಾಗಿ ಕೊನೆಯ ಪಂದ್ಯ ಕೇವಲ ಔಪಚಾರಿಕವಾಗಿರಲಿದೆ.

ಹಾಗಿದ್ದರೂ ಭಾರತ ಈ ಪಂದ್ಯ ಗೆದ್ದರೆ ಹೊಸ ಇತಿಹಾಸ ಬರೆಯಲಿದೆ. ಐದನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸೋತಷ್ಟೇ ಪಂದ್ಯಗಳನ್ನು ಗೆದ್ದ ದಾಖಲೆ ಮಾಡಲಿದೆ. ಭಾರತ 1932 ರಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿತ್ತು. ಇದುವರೆಗೆ 178 ಪಂದ್ಯ ಸೋತಿದ್ದು, 177 ಪಂದ್ಯಗಳನ್ನು ಗೆದ್ದುಕೊಂಡಿದೆ. 222 ಪಂದ್ಯಗಳನ್ನು ಡ್ರಾ ಅಥವಾ ಟೈ ಮಾಡಿಕೊಂಡಿದೆ. ಐದನೇ ಪಂದ್ಯ ಗೆದ್ದರೆ ಸೋತಷ್ಟೇ ಪಂದ್ಯವನ್ನು ಗೆದ್ದ ದಾಖಲೆ ಮಾಡಲಿದೆ.

ಭಾರತದ ಈಗಿನ ಫಾರ್ಮ್ ನೋಡಿದರೆ  ಈ ಸಾಧನೆ ಮಾಡುವುದು ಕಷ್ಟವೇನಲ್ಲ. ಇಂಗ್ಲೆಂಡ್ ಈಗಾಗಲೇ ಸೋತು ಸುಣ್ಣವಾಗಿದೆ. ಭಾರತದ ಎದುರು ಬಾಝ್ ಬಾಲ್ ಆಟ ವರ್ಕೌಟ್ ಆಗಿಲ್ಲ. ಇದೀಗ ಅಂತಿಮ ಟೆಸ್ಟ್ ಪಂದ್ಯಕ್ಕೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ಕಮ್ ಬ್ಯಾಕ್ ಮಾಡುತ್ತಿರುವುದರಿಂದ ತಂಡ ಇನ್ನಷ್ಟು ಸ್ಟ್ರಾಂಗ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ