ವ್ಯಾಪಾರ ಪಾಲುದಾರತ್ವದಲ್ಲಿ ಭಾರತದ ನಂ.1

ಸೋಮವಾರ, 30 ಮೇ 2022 (09:15 IST)
ನವದೆಹಲಿ : ಚೀನಾವನ್ನು ಹಿಂದಿಕ್ಕಿರುವ ಅಮೆರಿಕ, 2021-22ನೇ ಸಾಲಿನಲ್ಲಿ ಭಾರತದ ನಂ.1 ವ್ಯಾಪಾರ ಪಾಲುದಾರ ದೇಶವಾಗಿ ಹೊಮ್ಮಿದೆ.
 
ಇದು ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಸಂಬಂಧದ ಪ್ರತೀಕ ಎಂದು ಬಣ್ಣಿಸಲಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಅನ್ವಯ, 2020-21ರಲ್ಲಿ ಉಭಯ ದೇಶಗಳ ನಡುವೆ 6.61 ಲಕ್ಷ ಕೋಟಿ ರು.ವ್ಯಾಪಾರ ನಡೆದಿದ್ದರೆ,

ಅದು 2021-22ರಲ್ಲಿ 9.07 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ ಅಮೆರಿಕಕ್ಕೆ ಭಾರತದ ರಫ್ತು 5.78 ಲಕ್ಷ ಕೋಟಿ ರು.ಗೆ (2020-21ರಲ್ಲಿ 3.92 ಲಕ್ಷ ಕೋಟಿ ರು.) ಮತ್ತು ಆಮದು ಪ್ರಮಾಣ 3.29 ಲಕ್ಷ ಕೋಟಿ ರು.ಗೆ ತಲುಪಿದೆ (2020-21ರಲ್ಲಿ 2.20 ಲಕ್ಷ ಕೋಟಿ ರು.).

ಮತ್ತೊಂದೆಡೆ ಇದೇ ಅವಧಿಯಲ್ಲಿ ಭಾರತ ಮತ್ತು ಚೀನಾ ನಡುವಿನ ವಹಿವಾಟು 8.77 ಲಕ್ಷ ಕೋಟಿ ರು.ಗೆ (2020-21ರಲ್ಲಿ 6.55 ಲಕ್ಷ ಕೋಟಿ ರು.) ಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ