ನವದೆಹಲಿ : ರಷ್ಯಾ, ಶ್ರೀಲಂಕಾ, ಮಾರಿಷಸ್ ಜೊತೆ ರುಪಿ ವ್ಯವಹಾರ ಯಶಸ್ವಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಹೆಚ್ಚಿನ ರಾಷ್ಟ್ರಗಳೊಂದಿಗೆ ಅಂತಹ ಅವಕಾಶಗಳನ್ನು ಅನ್ವೇಷಿಸುವಂತೆ ವ್ಯಾಪಾರ ಸಂಸ್ಥೆಗಳು ಮತ್ತು ಬ್ಯಾಂಕುಗಳನ್ನು ಕೇಳಿದೆ.
ರುಪಿ ವ್ಯವಹಾರ ನಡೆಸಲು ಈಗಾಗಲೇ ಭಾರತ ಈ ಮೂರು ರಾಷ್ಟ್ರಗಳ ಜೊತೆ ಸ್ಪೆಷಲ್ ರೂಪಾಯಿ ವೋಸ್ಟ್ರೋ ಅಕೌಂಟ್ಸ್ ತೆರೆದಿದೆ. ಇತ್ತೀಚೆಗೆ ಪೀಪಲ್ಸ್ ಬ್ಯಾಂಕ್ ಆಫ್ ಶ್ರೀಲಂಕಾ ಮತ್ತು ಮಾರಿಷಸ್ ಲಿಮಿಟೆಡ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆದಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರಷ್ಯಾದ ರೋಸ್ ಬ್ಯಾಂಕ್ನಲ್ಲಿ ಖಾತೆ ತೆರೆದರೆ ಚೆನ್ನೈ ಮೂಲದ ಇಂಡಿಯನ್ ಬ್ಯಾಂಕ್ ಶ್ರೀಲಂಕಾದ ಮೂರು ಬ್ಯಾಂಕ್ನಲ್ಲಿ ಖಾತೆ ತೆರೆದಿದೆ.
ಆರ್ಬಿಐ ಅನುಮತಿಯ ಬಳಿಕ 18 ರುಪಿ ಖಾತೆಗಳು 11 ಬ್ಯಾಂಕ್ನಲ್ಲಿ ತೆರೆಯಲ್ಪಟ್ಟಿದೆ. ಇದರಲ್ಲಿ ಎರಡು ರಷ್ಯಾ, ಎರಡು ಶ್ರೀಲಂಕಾ ಬ್ಯಾಂಕ್ಗಳು ಸೇರಿವೆ.