ಭಾರತ-ಬಾಂಗ್ಲಾದೇಶ ಟೆಸ್ಟ್ ನಾಳೆಯಿಂದ: ಈ ಟೆಸ್ಟ್ ಟೀಂ ಇಂಡಿಯಾಗೆ ಯಾಕೆ ಮಹತ್ವ?
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಪಾಲಾಗಿದೆ. ಚೇತೇಶ್ವರ ಪೂಜಾರಗೆ ಉಪನಾಯಕತ್ವ ನೀಡಲಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಶುಬ್ನಂ ಗಿಲ್ ಗೆ ಆರಂಭಿಕರಾಗಿ ಕಣಕ್ಕಿಳಿಯಲು ಅವಕಾಶ ಸಿಗಲಿದೆ. ಸ್ಪಿನ್ ವಿಭಾಗದಲ್ಲಿ ಹಿರಿಯ ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್ ಆಡಲಿಳಿಯಬಹುದು. ವೇಗದ ಬೌಲಿಂಗ್ ನಲ್ಲಿ ಟೀಂ ಇಂಡಿಯಾಗೆ ಸಾಕಷ್ಟು ಆಯ್ಕೆಗಳಿವೆ. ಈ ಪೈಕಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಉಮೇಶ್ ಯಾದವ್ ಸ್ಥಾನ ಪಡೆಯಬಹುದು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಭಾರತಕ್ಕೆ ಮುಂದಿನ ಎರಡು ಟೆಸ್ಟ್ ಸರಣಿಗಳ ಗೆಲುವು ಅಗತ್ಯವಾಗಿದೆ. ಬಾಂಗ್ಲಾದೇಶ ಎರಡು ಟೆಸ್ಟ್ ಪಂದ್ಯ ಹಾಗೂ ಇದಾದ ಬಳಿಕ ಬರಲಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳನ್ನೂ ಗೆದ್ದರೆ ಮಾತ್ರ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಶಿಪ್ ರೇಸ್ ನಲ್ಲಿ ಉಳಿದುಕೊಳ್ಳಬಹುದಾಗಿದೆ. ಹೀಗಾಗಿ ಈ ಸರಣಿ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ.