Pehalgam attack:ಎನ್ಐಎ ತನಿಖೆಯಲ್ಲಿ ಪಹಲ್ಗಾಮ್ ಉಗ್ರರ ಯೋಜನೆ ಬಗ್ಗೆ ಮತ್ತಷ್ಟು ರೋಚಕ ವಿಚಾರಗಳು ಬಹಿರಂಗ

Krishnaveni K

ಮಂಗಳವಾರ, 29 ಏಪ್ರಿಲ್ 2025 (16:00 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಉಗ್ರರ ಬಗ್ಗೆ ಮತ್ತಷ್ಟು ರೋಚಕ ವಿಚಾರಗಳು ಈಗ ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.

ಪಹಲ್ಗಾಮ್ ನಲ್ಲಿ ದಾಳಿ ನಡೆಸಲು ನಾಲ್ವರು ಉಗ್ರರು ಬಂದಿದ್ದರು. ಈ ಪೈಕಿ ಓರ್ವ ಕಾಡಿನಲ್ಲಿ ಅಡಗಿ ಕುಳಿತು ಇತರರಿಗೆ ಕಾವಲಾಗಿ ಕುಳಿತಿದ್ದ. 2.30 ರವರೆಗೆ ಉಗ್ರರು ತಿಂಡಿ ಸ್ಟಾಲ್ ಬಳಿ ಕುಳಿತು ಪ್ರವಾಸಿಗರನ್ನು ವೀಕ್ಷಿಸುತ್ತಿದ್ದರು. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ದಾಳಿ ಆರಂಭಿಸಿದ್ದರು.

ಎಲ್ಲಕ್ಕಿಂತ ಗಮನಿಸಬೇಕಾದ ಅಂಶವೆಂದರೆ ಉಗ್ರರು ಏಪ್ರಿಲ್ 20 ರಂದೇ ದಾಳಿ ನಡೆಸಲು ಯೋಜನೆ ನಡೆಸಿದ್ದರು. ಆದರೆ ಅಂದು ದಟ್ಟ ಮಂಜು, ಮಳೆಯ ವಾತಾವರಣವಿತ್ತು. ಹೀಗಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಆ ದಿನ ದಾಳಿ ನಡೆಸದೇ ಇರಲು ಉಗ್ರರು ತೀರ್ಮಾನಿಸಿದ್ದರು. ಹೆಚ್ಚು ಪ್ರವಾಸಿಗರು ಇರಬೇಕು ಮತ್ತು ಹೆಚ್ಚು ಜನರನ್ನು ಕೊಲೆ ಮಾಡಬೇಕು ಎಂಬುದೇ ಅವರ ಟಾರ್ಗೆಟ್ ಆಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ