Pehalgam: ಕಾಶ್ಮೀರ ಪ್ರವಾಸ ಕ್ಯಾನ್ಸಲ್ ಮಾಡ್ತಿರುವ ಜನ: ರೊಚ್ಚಿಗೆದ್ದ ಕಾಶ್ಮೀರಿಗರು

Krishnaveni K

ಶನಿವಾರ, 26 ಏಪ್ರಿಲ್ 2025 (08:32 IST)
Photo Credit: X
ಜಮ್ಮು ಕಾಶ್ಮೀರ: ಪಹಲ್ಗಾವ್ ನಲ್ಲಿ ಉಗ್ರರ ದಾಳಿಯ ಬಳಿಕ ಈಗ ಜನ ಮತ್ತೆ ಕಾಶ್ಮೀರಕ್ಕೆ ತೆರಳಲು ಭಯಪಡುವಂತಾಗಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡಿದ್ದವರೆಲ್ಲಾ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇದರಿಂದ ಕಾಶ್ಮೀರಿಗರು ರೊಚ್ಚಿಗೆದ್ದಿದ್ದಾರೆ.

ಒಂದು ಕಾಲದಲ್ಲಿ ಉಗ್ರರ ಹಾವಳಿಗೆ ತತ್ತರಿಸಿದ್ದ ಕಾಶ್ಮೀರ ಆರ್ಟಿಕಲ್ 370 ರದ್ದತಿ ಬಳಿಕ ಶಾಂತಿಯ ತಾಣವಾಗಿತ್ತು. ಇತ್ತೀಚೆಗೆ ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರಕ್ಕೆ ಪ್ರವಾಸ ತೆರಳುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ದುಡಿಯಲು ನಾನಾ ದಾರಿಗಳಿದ್ದವು.

ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ವ್ಯಾಪಾರ, ಲಾಡ್ಜ್, ಕುದುರೆ ಸವಾರಿ ಇತ್ಯಾದಿಗಳ ಮೂಲಕ ಸ್ಥಳೀಯರು ಆದಾಯಕ್ಕೆ ಮೂಲ ಕಂಡುಕೊಂಡಿದ್ದರು. ಆದರೆ ಈಗ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದ ಬಳಿಕ ಬಹುತೇಕರು ಪ್ರವಾಸ ಕ್ಯಾನ್ಸಲ್ ಮಾಡುತ್ತಿದ್ದಾರೆ. ವಿಮಾನಗಳೂ ಬಿಕೋ ಎನ್ನುತ್ತಿವೆ.

ಇದರಿಂದಾಗಿ ಸ್ಥಳೀಯರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಹೀಗಾಗಿ ರೊಚ್ಚಿಗೆದ್ದಿರುವ ಸ್ಥಳೀಯರು ಉಗ್ರರನ್ನು ಮಟ್ಟ ಹಾಕಿ ಮತ್ತೆ ಕಾಶ್ಮೀರನ್ನು ಶಾಂತಿಯ ತಾಣವಾಗಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪ್ರವಾಸಿಗರು ಬಾರದೇ ಇದ್ದರೆ ನಮ್ಮ ಹೊಟ್ಟೆಪಾಡೇನು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಸದ್ಯಕ್ಕಂತೂ ಪ್ರವಾಸಿಗರು ಕಾಶ್ಮೀರದ ಕಡೆಗೆ ತೆರಳುವುದು ಅನುಮಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ