PM Modi: ರಾಹುಲ್ ಗಾಂಧಿ ಬಂದಾಯ್ತು, ಪ್ರಧಾನಿ ಮೋದಿ ಯಾಕೆ ಇನ್ನೂ ಪಹಲ್ಗಾಮ್ ಸಂತ್ರಸ್ತರ ಭೇಟಿಯಾಗಿಲ್ಲ

Krishnaveni K

ಶುಕ್ರವಾರ, 25 ಏಪ್ರಿಲ್ 2025 (20:32 IST)
ನವದೆಹಲಿ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡವರನ್ನು ಈಗಾಗಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಯಾಕೆ ಇನ್ನೂ ಭೇಟಿ ಮಾಡಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಪಹಲ್ಗಾಮ್ ನಲ್ಲಿ ಪ್ರವಾಸಿ ಹಿಂದೂಗಳ ಮೇಲೆ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದು ಹಲವರು ಗಾಯಗೊಂಡು ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿ ನಡೆದಾಗ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಕೂಡಲೇ ಭಾರತಕ್ಕೆ ಬಂದು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.

ಆದರೆ ಇದುವರೆಗೆ ಮೋದಿ ಗಾಯಾಳುಗಳನ್ನು ನೇರವಾಗಿ ಭೇಟಿ ಮಾಡಿಲ್ಲ. ಅದರ ಬದಲು ಬಿಹಾರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಇದನ್ನೇ ಈಗ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇನ್ನೊಂದೆಡೆ ಅಮೆರಿಕಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಬಂದಿರುವ ರಾಹುಲ್ ಗಾಂಧಿ ಇಂದು ಗಾಯಾಳುಗಳ ಭೇಟಿಗೆ ಶ್ರೀನಗರಕ್ಕೆ ಬಂದಿದ್ದರು. ಆದರೆ ಮೋದಿ ಯಾಕೆ ಇನ್ನೂ ಬಂದಿಲ್ಲ ಮತ್ತು ಸರ್ವಪಕ್ಷಗಳ ಸಭೆಯನ್ನೂ ಅಟೆಂಡ್ ಮಾಡಿಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ