Indian Army: ಮತ್ತೆ ಗಡಿಯಲ್ಲಿ ಪಾಕಿಸ್ತಾನ ಕ್ಯಾತೆ: ಗುಂಡಿನ ದಾಳಿಗೆ ಭಾರತೀಯರಿಂದಲೂ ಗುಂಡೇ ಉತ್ತರ

Krishnaveni K

ಶನಿವಾರ, 26 ಏಪ್ರಿಲ್ 2025 (09:38 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಮತ್ತೊಮ್ಮೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ.
 

ಪಹಲ್ಗಾಮ್ ಉಗ್ರ ದಾಳಿಯ ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಸಾಕಷ್ಟು ಏಟು ಕೊಟ್ಟಿದೆ. ಇದರಿಂದಾಗಿ ಕೆರಳಿರುವ ಪಾಕಿಸ್ತಾನ ಬೇಕೆಂದೇ ಗಡಿ ಭಾಗದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ತನ್ನ ಹತಾಶೆ ಹೊರಹಾಕುತ್ತಿದೆ.

ಮೊನ್ನೆ ತಡರಾತ್ರಿಯೂ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿತ್ತು. ಇದೀಗ ಮತ್ತೆ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ. ಗಡಿನಿಯಂತ್ರಣ ರೇಖೆ ಬಳಿ ಎರಡು ದಿನ ಸತತವಾಗಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ ನಡೆದಿದೆ. ಇದನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಯಾವುದೇ ಗಾಯಗಳಾಗಿಲ್ಲ ಎಂದು ಭಾರತೀಯ ಸೇನೆ ಪ್ರಕಟಣೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ