ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ

ಮಂಗಳವಾರ, 25 ಏಪ್ರಿಲ್ 2023 (09:54 IST)
ತಿರುವನಂತಪುರಂ : ದೇಶದ ಮೆಟ್ರೋ ವಿಸ್ತರಣೆಯಲ್ಲಿ ಕೆಂದ್ರ ಸರ್ಕಾರ ಕ್ರಾಂತಿ ಮಾಡುತ್ತಿದ್ದು, ಹೊಸ ಮಾದರಿಯ ಮೆಟ್ರೋ ಸಂಚಾರಕ್ಕೆ ಕೇರಳದ ಕೊಚ್ಚಿ ಇನ್ಮುಂದೆ ಸಾಕ್ಷಿಯಾಗಲಿದೆ.
 
ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ 1,137 ಕೋಟಿ ರೂಪಾಯಿಯಾಗಿದೆ. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳನ್ನು ಈ ಮೆಟ್ರೋ ಸಂಚಾರ ಮಾಡಲಿದ್ದು, 8 ಎಲೆಕ್ಟ್ರಿಕ್ ಬೋಟ್ಗಳು, 38 ಟರ್ಮಿನಲ್ಗಳ ಮೂಲಕ ಪ್ರಯಾಣಿಕರಿಗೆ ಸೇವೆಗೆ ಸಿದ್ಧವಾಗಿದೆ.

ಈ ವಾಟರ್ ಮೆಟ್ರೋ ಯೋಜನೆಯು 78 ಕಿಲೋಮೀಟರ್ ವ್ಯಾಪಿಸಿದ್ದು, ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಈ ವಾಟರ್ ಮೆಟ್ರೋ ರಬ್ಬರ್ ಟೈರ್ಡ್ ಎಲೆಕ್ಟ್ರಿಕ್ ಬೋಗಿಗಳನ್ನು ಹೊಂದಿದ್ದು, ಇದನ್ನು ಮಹಾರಾಷ್ಟ್ರದ ನಾಸಿಕ್ನಲ್ಲಿ ತಯಾರು ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ