ಬ್ರಿಟನ್ ಐಕ್ಯೂ ಟೆಸ್ಟ್`ನಲ್ಲಿ ಆಲ್ಬರ್ಟ್ ಐನ್`ಸ್ಟೈನ್ ಮೀರಿಸಿದ ಭಾರತದ ವಿದ್ಯಾರ್ಥಿ

ಶನಿವಾರ, 1 ಜುಲೈ 2017 (18:17 IST)
11 ವರ್ಷದ ಭಾರತ ಮೂಲದ ವಿದ್ಯಾರ್ಥಿಯೊಬ್ಬ ಬ್ರಿಟನ್ನಿನ ಮೆನ್ಸಾ ಐಕ್ಯೂ ಟೆಸ್ಟ್`ನಲ್ಲಿ ಅತ್ಯುತ್ತಮ 162 ಸ್ಕೋರ್ ಮಾಡಿದ್ದಾರೆ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್`ಸ್ಟೈನ್`ಗಿಂತಲೂ ಈ ಬಾಲಕ 2 ಅಂಕ ಹೆಚ್ಚು ಗಳಿಸಿದ್ದಾನೆ. ಹೀಗಾಗಿ, ದೇಶದ ಅತ್ಯಂತ ಬುದ್ಧಿವಂತ ಬಾಲಕ ಎಂಬ ಖ್ಯಾತಿಗೆ ಈತ ಪಾತ್ರವಾಗಿದ್ದಾನೆ.

ದಕ್ಷಿಣ ಬ್ರಿಟನ್ನಿನ ಅರ್ಣವ್ ಶರ್ಮಾ ಈ ದಾಖಲೆ ಬರೆದಿದ್ದಾನೆ.ಯಾವುದೇ ಪೂರ್ವ ತಯಾರಿ ಇಲ್ಲದೆ, ಸಾಂಪ್ರದಾಯಿಕ ಪ್ರಶ್ನೆಪತ್ರಿಕೆಯನ್ನೂ ನೋಡದೇ 2 ವಾರಗಳ ಹಿಂದಷ್ಟೇ ಐಕ್ಯೂ ಟೆಸ್ಟ್ ಪಾಸ್ ಮಾಡಿದ್ದಾನೆ.

ಮೆನ್ಸಾ ಐಕ್ಯೂ ಟೆಸ್ಟ್ ಅತ್ಯಂತ ಕಠಿಣವಾಗಿದ್ದು,ಹಲವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಹೀಗಾಗಿ, ನಾನು ಪಾಸ್ ಆಗುತ್ತೇನೆಂಬ ನಂಬಿಕೆ ಇರಲಿಲ್ಲ ಅಂತಾರೆ  ಬಾಲಕ ಅರ್ಣವ್. ಪರೀಕ್ಷೆಗೂ ಮುನ್ನ ಯಾವುದೇ ಪೂರ್ವ ತಯಾರಿ ಇಲ್ಲದಿದ್ದರೂ ನಾನು ಗಾಬರಿಯಾಗಲಿಲ್ಲ. ತಾಳ್ಮೆಯಿಂದಲೇ ಪರೀಕ್ಷೆ ಎದುರಿಸಿದೆ. ಪರೀಕ್ಷೆಯ ಫಲಿತಾಂಶ ಕೇಳಿ ಪೋಷಕರು ಸಂತಸಗೊಂಡಿದ್ದಾರೆ ಅಂತಾರೆ ಅರ್ಣವ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ