ಪ್ರಯಾಣಿಕರ ಲಗೇಜ್‌ ಮರೆತು ಇಸ್ತಾನ್‌ಬುಲ್‌ಗೆ ಹೊರಟ ಇಂಡಿಗೋ

ಬುಧವಾರ, 18 ಸೆಪ್ಟಂಬರ್ 2019 (18:21 IST)
ದೆಹಲಿ: ದೆಹಲಿಯಿಂದ ಇಸ್ತಾನ್‌ಬುಲ್‌ಗೆ ತೆರಳುತ್ತಿದ್ದ @IndiGo6E ವಿಮಾನ ಪ್ರಯಾಣಿಕರ ಲಗೇಜ್‌ಗಳನ್ನು ವಿಮಾನಕ್ಕೆ ಲೋಡ್ ಮಾಡಲು ಮರೆತಿರುವುದು ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. 
ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ವಿಮಾನದಲ್ಲಿ ಲೋಡ್ ಮಾಡುವಲ್ಲಿ ವಿಮಾನಯಾನ ಸಂಸ್ಥೆ ಮರೆತಿದೆ ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಪ್ರಯಾಣಿಕರು ಸಾಮಾಜಿಕ ಜಾಲ ತಾಣಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
 
ಚಿನ್ಮಯ್ ದಾಬ್ಕೆ ಎನ್ನುವ ಪ್ರಯಾಣಿಕರೊಬ್ಬರು, ವಿಮಾನಯಾನ ಸಂಸ್ಥೆ ಪ್ರಯಾಣಿಕರ ಲಗೇಜ್‌ಗಳನ್ನು ವಿಮಾನಕ್ಕೆ ಲೋಡ್ ಮಾಡಲು ಮರೆತಿರುವುದು ಆಘಾತಕಾರಿ ಸಂಗತಿ ಎಂದು ಗುಡುಗಿದ್ದಾರೆ. ವಿಮಾನಯಾನ ಸಂಸ್ಥೆ ನೀಡಿದ ಕ್ಷಮೆಪತ್ರದೊಂದಿಗೆ ತಮ್ಮ ಸೆಲ್ಫಿ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
 
ವಿಮಾನಯಾನ ಸಂಸ್ಥೆ ಕೆಲ ಪ್ರಯಾಣಿಕರ ಲಗೇಜ್‌ಗಳನ್ನು ಲೋಡ್ ಮಾಡಲು ಮರೆಯಬಹುದು. ವಿಮಾನದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಲಗೇಜ್‌ಗಳನ್ನು ಮರೆತಿರುವುದು ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ