Indore Raja Raghuwamshi murder: ಸೋನಂಗೆ ನನ್ನ ಮೇಲೆ ಇಂಟ್ರೆಸ್ಟೇ ಇಲ್ಲ ಎಂದಿದ್ದ ರಾಜ ರಘುವಂಶಿ
ಸೋನಂಗೆ ರಾಜ ರಘುವಂಶಿ ಜೊತೆ ಮದುವೆ ಇಷ್ಟವಿರಲಿಲ್ಲ. ಯಾಕೆಂದರೆ ಆಗಲೇ ಆಕೆಗೆ ರಾಜ್ ಕುಶ್ವಾಹ ಜೊತೆ ಸಂಬಂಧವಿತ್ತು. ಇದೇ ಕಾರಣಕ್ಕೆ ರಘುವಂಶಿಯನ್ನು ಮದುವೆಯಾದರೂ ಆತನನ್ನು ಕೊಂದು ವಿಧವೆಯಾದರೆ ರಾಜ್ ಜೊತೆ ಮದುವೆಯಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದಳು.
ಆದರೆ ಸೋನಂ ಮದುವೆಗೆ ಮುನ್ನವೂ ರಾಜ ಮೇಲೆ ಇಂಟ್ರೆಸ್ಟೇ ತೋರಿಸುತ್ತಿರಲಿಲ್ಲವಂತೆ. ಇದನ್ನು ರಾಜ ತನ್ನ ತಾಯಿ ಬಳಿ ಹೇಳಿಕೊಂಡಿದ್ದನಂತೆ. ಯಾಕೋ ನನ್ನ ಮೇಲೆ ಸೋನಂಗೆ ಮನಸ್ಸೇ ಇದ್ದಂತೆ ಕಾಣುತ್ತಿಲ್ಲ ಎಂದಿದ್ದನಂತೆ.
ಹಾಗಿದ್ದರೂ ಸೋನಂಳನ್ನು ರಾಜ ಮದುವೆಯಾಗುವುದಕ್ಕೆ ಕಾರಣ ಕುಟುಂಬ. ಆಗಲೇ ಎರಡೂ ಕುಟುಂಬದಲ್ಲಿ ಮದುವೆಗಾಗಿ ಸಾಕಷ್ಟು ತಯಾರಿ ನಡೆದಿತ್ತು. ಈಗ ಮದುವೆ ಮುರಿದರೆ ಎರಡೂ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸೋನಂಗೆ ತಾಳಿ ಕಟ್ಟಿದ್ದನಂತೆ ಸೋನಂ.