ಪಂಜಾಬ್‌ನ ಮೊಹಾಲಿಯಲ್ಲಿ 30 ಎಕರೆ ಜಾಗದಲ್ಲಿ ₹300ಕೋಟಿ ವೆಚ್ಚದಲ್ಲಿ ಇನ್ಫೋಸಿಸ್ ಹೊಸ ಕ್ಯಾಂಪಸ್‌

Sampriya

ಗುರುವಾರ, 25 ಸೆಪ್ಟಂಬರ್ 2025 (16:01 IST)
Photo Credit X
ಪಂಜಾಬ್‌: ಮೊಹಾಲಿಯಲ್ಲಿ ₹300 ಕೋಟಿ ವೆಚ್ಚದಲ್ಲಿ ಇನ್ಫೋಸಿಸ್ ಲಿಮಿಟೆಡ್ ಹೊಸ ಕ್ಯಾಂಪಸ್ ಅನ್ನು ಸ್ಥಾಪಿಸಲಿದೆ ಎಂದು ಪಂಜಾಬ್ ಕೈಗಾರಿಕಾ ಸಚಿವ ಸಂಜೀವ್ ಅರೋರಾ ಗುರುವಾರ ಹೇಳಿದ್ದಾರೆ.

ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅರೋರಾ ಅವರು, ಹೊಸ ಕ್ಯಾಂಪಸ್ 30 ಎಕರೆ ಜಾಗದಲ್ಲಿ ಬರಲಿದೆ.

ಮೊದಲ ಹಂತದಲ್ಲಿ 3 ಲಕ್ಷ ಚದರ ಅಡಿ ವಿಸ್ತೀರ್ಣ ನಿರ್ಮಾಣವಾಗಲಿದೆ, ಇದರಿಂದ ನಗರದಲ್ಲಿ 2,500 ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಮುಂದಿನ ಹಂತದಲ್ಲಿ 4.80 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.


2017 ರಿಂದ ಮೊಹಾಲಿಯಲ್ಲಿರುವ ಐಟಿ ಸೇವಾ ಕಂಪನಿ ಇನ್ಫೋಸಿಸ್ ನಗರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಂಪನಿಯ ಮೊಹಾಲಿ ಕೇಂದ್ರದ ಮುಖ್ಯಸ್ಥರಾಗಿರುವ ಸಮೀರ್ ಗೋಯೆಲ್, ಈ ಯೋಜನೆಗೆ ಕಂಪನಿಯು ರಾಜ್ಯ ಸರ್ಕಾರದಿಂದ ಉತ್ತಮ ಬೆಂಬಲವನ್ನು ಪಡೆದಿದೆ ಎಂದು ಹೇಳಿದರು.

"ನಾವು ಈ ಪ್ರದೇಶದಲ್ಲಿ ಸ್ವಲ್ಪ ಸಮಯದಿಂದ ಇದ್ದೇವೆ. ನಾವು ಈ ಪ್ರದೇಶದಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ" ಎಂದು ಗೋಯೆಲ್ ಹೇಳಿದರು.

ರಾಜ್ಯ ಸರ್ಕಾರವು ಹಲವಾರು ಉಪಕ್ರಮಗಳಿಗೆ ಮುಂದಾಗಿರುವುದು ಪಂಜಾಬ್ ಮತ್ತಷ್ಟು ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡಿದೆ ಎಂದು ಸಚಿವರು ಹೇಳಿದರು.

"ನಾವು 45 ದಿನಗಳಲ್ಲಿ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡುತ್ತಿದ್ದೇವೆ. ಹೂಡಿಕೆದಾರರು ಪಂಜಾಬ್‌ನಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ ಎಂದು ಹೇಳಲು ನಮಗೆ ಸಂತೋಷವಾಗಿದೆ" ಎಂದು ಅರೋರಾ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ