ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ ಕಡ್ಡಾಯ
ಗುರುವಾರ, 20 ಜನವರಿ 2022 (06:11 IST)
ಹೈದರಾಬಾದ್ : 2022-23ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಪರಿಚಯಿಸಲು ಹಾಗೂ ಖಾಸಗಿ ಶಾಲೆಗಳು, ಜೂನಿಯರ್ ಮತ್ತು ಪದವಿ ಕಾಲೇಜುಗಳ ಶುಲ್ಕ ನಿಯಂತ್ರಿಸಲು ತೆಲಂಗಾಣ ಸರ್ಕಾರ ಸಂಪುಟ ನಿರ್ಧರಿಸಿದೆ.
ಸೋಮವಾರ ಕರೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಶಿಕ್ಷಣ ಸಚಿವೆ ಸುಬಿತಾ ಇಂದ್ರ ರೆಡ್ಡಿ ನೇತೃತ್ವದಲ್ಲಿ ಸಚಿವರ ಉಪಸಮಿತಿಯನ್ನು ಸಂಪುಟ ರಚಿಸಿದ್ದು, ಈ ವಿಷಯಗಳ ಕುರಿತು ಅಧ್ಯಯನ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.
ಸಭೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಲು 7,289 ಕೋಟಿ ವೆಚ್ಚದ `ಮನ ವೂರು ಮನ ಬಡಿ (ನಮ್ಮ ಊರು-ನಮ್ಮ ಶಾಲೆ) ಯೋಜನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.