ಕುಂಭ ಮೇಳ 2025: ನಾಗ ಸಾಧುಗಳು ಎಲ್ಲಿರುತ್ತಾರೆ, ಏನನ್ನು ಸೇವನೆ ಮಾಡುತ್ತಾರೆ, ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ

Krishnaveni K

ಶುಕ್ರವಾರ, 10 ಜನವರಿ 2025 (10:44 IST)
Photo Credit: X
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ ಕುಂಭಮೇಳ ಆರಂಭವಾಗಲಿದ್ದು ಕುಂಭ ಮೇಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ನಾಗಾ ಸಾಧುಗಳು ಆಗಮಿಸುತ್ತಾರೆ.
 

ನಾಗಾ ಸಾಧುಗಳ ಜೀವನವೇ ಕೌತುಕದಿಂದ ಕೂಡಿದೆ. ಅವರು ನಮ್ಮ ನಿಮ್ಮಂತೆ ಮೈ ತುಂಬಾ ಬಟ್ಟೆ ಹಾಕಿಕೊಂಡು, ಸೂಟು, ಬೂಟು ಹಾಕಿಕೊಂಡು ಇರುವವರಲ್ಲ. ನಾಗಾಸಾಧುಗಳು ತಮ್ಮ ಜೀವನವಿಡೀ ಭೋಲೇನಾಥನ ಧ್ಯಾನಕ್ಕಾಗಿ ಮೀಸಲಿಡುತ್ತಾರೆ. ಇವರ ಜೀವನಶೈಲಿಯೇ ವಿಶಿಷ್ಟ ಮತ್ತು ಕುತೂಹಲಕಾರಿಯಾಗಿರುತ್ತದೆ.

ಕುಂಭಮೇಳವಿರುವಾಗ ಎಲ್ಲೋ ಇರುವ ನಾಗಾ ಸಾಧುಗಳು ಒಮ್ಮೆಲೇ ಪ್ರತ್ಯಕ್ಷರಾಗುತ್ತಾರೆ. ಪವಿತ್ರ ಸ್ನಾನ ಮಾಡಿ ದೇವರ ಧ್ಯಾನದಲ್ಲಿ ತೊಡಗಿರುತ್ತಾರೆ. ನಾಗಾಸಾಧುಗಳು ಅತ್ಯಂತ ಶಿಸ್ತಿನ ಜೀವನ ಶೈಲಿ ನಡೆಸುತ್ತಾರೆ. ಕೆಲವರು ಮಾತ್ರ ಕೆಳಗೆ ತುಂಟು ಬಟ್ಟೆ ಧರಿಸುತ್ತಾರೆ. ಇನ್ನು ಕೆಲವರು ನಗ್ನರಾಗಿಯೇ ಬರುತ್ತಾರೆ.

ನಾಗಾಸಾಧುಗಳು ಗುಹೆಗಳಲ್ಲಿ ಧ್ಯಾನ ನಿರತರಾಗಿರುತ್ತಾರೆ ಎಂದು ಹೇಳಲಾಗಿದೆ. ವರ್ಷಕ್ಕೆ ಎರಡೋ ಮೂರೋ ಬಾರಿ ಮಾತ್ರ ತಮ್ಮ ಗುಹೆಗಳನ್ನು ಬದಲಾಯಿಸುತ್ತಾರೆ. ಅವರು ನಮ್ಮಂತೆ ಅನ್ನ, ಆಹಾರ ಸೇವನೆ ಮಾಡುವುದಿಲ್ಲ. ಗಡ್ಡೆ, ಗೆಣಸು, ಹಣ್ಣುಗಳೇ ಅವರ ಆಹಾರವಾಗಿರುತ್ತದೆ. ಕಾಡು ಮೇಡುಗಳಲ್ಲಿ ಅಲೆಯುತ್ತಾ ಇರುತ್ತಾರೆ. ಕೇವಲ 6 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಅಥವಾ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳದ ಸಂದರ್ಭದಲ್ಲಿ ಮಾತ್ರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.  ಇದೀಗ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಇಂತಹ ಅನೇಕ ಸಾಧುಗಳು ಬಂದು ಸೇರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ