ಐಪಿಎಸ್ ಅಧಿಕಾರಿ ಪತ್ನಿ ಬಂಧನ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!

ಮಂಗಳವಾರ, 31 ಅಕ್ಟೋಬರ್ 2017 (17:20 IST)
ಹೈದರಾಬಾದ್: ಯುಪಿಎಸ್‍ಸಿ ಮುಖ್ಯ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ಪತ್ನಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಐಪಿಎಸ್ ಅಧಿಕಾರಿ ಸಫೀರ್ ಕರೀಂ ಪತ್ನಿ ಜಾಯ್ಸಿ ಬಂಧಿತ ಮಹಿಳೆ. ಸದ್ಯ ಐಪಿಎಸ್ ತರಬೇತಿಯಲ್ಲಿರುವ ಕರೀಂ ಸೋಮವಾರದಂದು ಪರೀಕ್ಷೆಯಲ್ಲಿ ಕಾಪಿ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಜಾಯ್ಸಿ ತನ್ನ ಗಂಡನಿಗೆ ಸಹಾಯ ಮಾಡಲು ಹೈ-ಟೆಕ್ ವ್ಯವಸ್ಥೆ ಮಾಡಿಕೊಟ್ಟಿದ್ದ ಆರೋಪ ಹಾಗೂ ಅಶೋಕ್‍ನಗರದಲ್ಲಿರುವ ಲಾ ಎಕ್ಸೆಲೆನ್ಸ್ ಐಎಎಸ್ ಸ್ಟಡಿ ಸರ್ಕಲ್ ನಿರ್ದೇಶಕ ಡಾ.ಪಿ.ರಾಮಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಹೈದರಾಬಾದ್ ಪೊಲೀಸರು ಬಂಧನ ಮಾಡಿದ್ದಾರೆ.

ಜಾಯ್ಸಿ ಹಾಗೂ ರಾಮಬಾಬು ಉತ್ತರಗಳನ್ನು ಕರೀಂಗೆ ರವಾನಿಸಲು ಬಳಸಿದ ಹಾರ್ಡ್ ಡಿಸ್ಕ್, ಲ್ಯಾಪ್‍ ಟಾಪ್, ಐಪ್ಯಾಡ್ ಹಾಗೂ ಇತರೆ ಉಪಕರಣಗಳನ್ನು ಟಾಸ್ಕ್ ಫೋರ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಚೆನ್ನೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕರೀಂ ಸದ್ಯ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ