ಇಂಡಿಯಾ ಒಕ್ಕೂಟದಲ್ಲಿನ ಪಿಎಂ ಅಭ್ಯರ್ಥಿ ಕುರ್ಚಿಗೆ ಸೂಟೇಬಲ್ ಅವರೇನಾ.?

ಮಂಗಳವಾರ, 12 ಡಿಸೆಂಬರ್ 2023 (20:04 IST)
ಒಂದೇ ಒಂದು ದೊಡ್ಡ ಅಘಾತ ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಬಹುದು, ಎಷ್ಟೆಲ್ಲಾ ಒಡಕುನ್ನು ಮೂಡಿಸಬಹುದು ಅನ್ನೊದಕ್ಕೆ ನಿದರ್ಶನ. ಪಂಚರಾಜ್ಯಗಳ ಅಖಾಡದಲ್ಲಿ ಕೈ ಪಾಳಯಕ್ಕೆ ಆದ ಬಹು ದೊಡ್ಡ ಸೋಲು..!
 
ಕಾಂಗ್ರೆಸ್ ಸಾರಥ್ಯದಲ್ಲಿ ಮೋದಿ ಎಂಬ ಮಹಾ ನಾಯಕನನ್ನು ಸೋಲಿಸುವ ದೊಡ್ಡ ಅಜೆಂಡಾ ಇಂಡಿಯಾ ಒಕ್ಕೂಟ ರಚನೆ ಆದಾಗಲೇ ಸಿದ್ದಗೊಂಡಿತ್ತು.. ನೋಡಿ ಬರೀ ಮೋದಿ ಎಂಬ ಪ್ರಚಂಡ ಶಕ್ತಿಯನ್ನು ಸೋಲಿಸೋದಕ್ಕೆ ಇಡೀ ಕೂಟವೇ ಒಂದಾಗಿ ಅಖಾಡಕ್ಕೆ ಇಳಿತಾವೆ ಅಂದರೆ ನಮೋ ಗತ್ತು ಏನಂತಾ ಹಿಂದೆ ಮುಂದೆ ಉರಿದುಕೊಳ್ಳುವ ಮಂದಿಗೆ ಅರ್ಥವಾಗಬೇಕಾದ ವಿಷಯ..!

ಪಂಚರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಕೊಟ್ಟ ಸೋಲಿನ ಏಟಿಗೆ, ಸುಧಾರಿಸಿಕೊಳ್ಳೊದಕ್ಕೂ ಒಂದಷ್ಟು ಟೈಂ ಖಂಡಿತಾ ಹಿಡಿಯುತ್ತೆ.. ಸದ್ಯ ಇದೀಗ ಮೋದಿಗೆ ಮೂರು ರಾಜ್ಯಗಳಲ್ಲಿ ಮತಾದಾರರು ಹಾಕಿದ ಜೈಕಾರಕ್ಕೆ ಇಂಡಿಯಾ ಕೂಟದ ಬುಡ ಅಲುಗಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ, ಈ ಕೂಟದಲ್ಲಿ ಅತಂತ್ರವಾಗುವ ಮಟ್ಟಿಗೆ.
 
ಯೆಸ್.. ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ವಿಜಯದ ಪತಾಕೆಯನ್ನು ಹಾರಿಸಿದ್ದರೆ, ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿ ಆಗದೇ, ರಾಹುಲ್‌ನಾಯಕತ್ವದಲ್ಲೇ ೨೦೨೪ರ ಸಮರವನ್ನು ಎದುರಿಸಬಹುದಿತ್ತು. ಆದರೆ ಈ ಸೋಲು ಕಾಂಗ್ರೆಸ್‌ನ್ನೆ ಇಂಡಿಯಾ ಒಕ್ಕೂಟದಲ್ಲಿ ಮೂಲೆಗುಂಪು ಮಾಡುವ ಹಂತಕ್ಕೆ ಹೋಗಿ ನಿಂತಿದೆ.. ಪ್ರಧಾನಿ ಅಭ್ಯರ್ಥಿ ಆಗಲು ಮಿತ್ರಪಕ್ಷದ ನಾಯಕರು ದ್ವಂದ್ವ ಸಿದ್ಧಾಂತಕ್ಕೆ ಕಟ್ಟು ಬಿದ್ದಿದ್ದಾರೆ..
 
ಕಾಂಗ್ರೆಸ್ ನೇತೃತ್ವದಲ್ಲೇ ಒಕ್ಕೂಟ ದಿಟ್ಟ ಹೆಜ್ಜೆಯನ್ನು ಇಟ್ಟಿದ್ರಿಂದ, ಸಹಜವಾಗಿಯೇ ಪ್ರಧಾನಿ ಅಭ್ಯರ್ಥಿಯೂ ನ್ಯಾಷಿನಲ್ ಪಾರ್ಟಿಯವರೇ ಅಂತ ಬಿಂಬಿಸಲಾಗಿತ್ತು. ಆದರೆ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಇಡೀ ಇಂಡಿಯಾ ಒಕ್ಕೂಟದ ದಿಕ್ಕನ್ನೇ ಪಕ್ಕಕ್ಕೆ ಸರಿಸಿ ಬಿಟ್ಟಿದೆ. ತಾ ಮುಂದೂ ನೀ ಮುಂದೂ ಅಂತ ಇಂಡಿಯಾ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿಯ ರೇಸ್‌ನಲ್ಲಿ ಹಲವು ಮಂದಿ ಟವಲ್ ಹಾಕಿ ಅಖಾಡಕ್ಕೆ ಇಳಿಯುವ ಸೂಚನೆಯನ್ನು ಕೊಟ್ಟಿದ್ದಾರೆ.. ಹಾಗೇ ನೋಡಿದರೇ, ಬಿಹಾರ ಸಿಎಂ ನಿತೀಶ್‌ಕುಮಾರ್, ಬಂಗಾಳದ ಸಿಎಂ ದೀದಿ ಕಣ್ಣು ಕೂಡ ಆ ಕಡೆ ಬಿದ್ದಿದೆ ಎನ್ನಲಾಗ್ತಿದೆ..!?? ಬಟ್ ಯಾವ ಕಣ್ಣು, ಯಾರ ಕಣ್ಣು ಅನ್ನೊದೆ ಬಿಗ್‌ಸಪ್ರೆöÊಸ್..!????

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ