ಕೋಲ್ಕತ್ತಾದ ಮದರ್ ಹೌಸ್ ಗುರಿಯಾಗಿಸಿದ್ದ ಶಂಕಿತ ಐಸಿಸ್ ಉಗ್ರ

ಭಾನುವಾರ, 25 ಡಿಸೆಂಬರ್ 2016 (16:56 IST)
ಶಂಕಿತ ಐಸಿಸ್ ಉಗ್ರ ಅಬು ಮೂಸಾ ಕೋಲ್ಕತ್ತಾದ  ಮದರ್ ಹೌಸ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. 

ಸಿರಿಯಾ-ಲಿಬಿಯಾದಲ್ಲಿ ಐಸಿಸ್ ಉಗ್ರರನ್ನು ನಾಮಾವಶೇಷ ಮಾಡಲು ನಡೆಯುತ್ತಿರುವ ಜಂಟಿ ಕಾರ್ಯಾಚರಣೆಗೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸುವ ಉದ್ದೇಶ ಆತನದಾಗಿತ್ತು ಎಂದು ತಿಳಿದು ಬಂದಿದೆ. 
 
ಮುಖ್ಯವಾಗಿ ಮದರ್ ಹೌಸ್‌ಗೆ ಭೇಟಿ ನೀಡುವ ಅಮೇರಿಕನ್, ಬ್ರಿಟಿಷ್ ಮತ್ತು ರಷ್ಯನ್ ವಿಸಿಟಿಗರನ್ನು ಗುರಿಯಾಗಿಸಿ ಆತ ದಾಳಿಯನ್ನು ಕೈಗೊಳ್ಳುವವನಿದ್ದ. ಹೀಗೆಂದು ಆತನೇ ಬಾಯ್ಬಿಟ್ಟಿದ್ದಾನೆ ಎಂದು ಆತನನ್ನು ವಿಚಾರಣೆ ನಡೆಸುತ್ತಿರುವ ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಮಿತಿ ತಿಳಿಸಿದೆ. 
 
ಜಮಾತ್ -ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಸಂಘಟನೆಗೆ ಸೇರಿರುವ ಮೊಹಮ್ಮದ್ ಮಸುದ್ದೀನ್ ಅಲಿಯಾಸ್  ಮೂಸಾ ಸಿರಿಯಾ ಮೂಲದ ಐಸಿಸ್ ಉಗ್ರ ಸುಲ್ತಾನ್ ಅಬ್ದುಲ್ ಖಾದಿರ್ ಅರ್ಮರ್  ಜತೆ ಸೇರಿ ಈ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.
 
ಅರ್ಮರ್ (40) ಮೂಲತಃ ಉತ್ತರಕನ್ನಡದ ಭಟ್ಕಳದವನು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ