ಗಗನಯಾತ್ರೆಗೆ ನಾಲ್ವರ ಸಿದ್ಧಗೊಳಿಸಲಿರುವ ಇಸ್ರೋ

ಬುಧವಾರ, 1 ಜನವರಿ 2020 (12:47 IST)
ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಈ ವರ್ಷ ಕೈಗೊಳ್ಳಲಿರುವ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಕೆ ಶಿವನ್ ಗಗನಯಾನಕ್ಕೆ ನಡೆಸಲಾಗುವ ಸಿದ್ಧತೆಗಳ ಬಗ್ಗೆ ತಿಳಿಸಿದ್ದಾರೆ.


ಈ ವರ್ಷ ಚಂದ್ರಯಾನ 3 ಯೋಜನೆ ಕೈಗೊಳ್ಳುವುದಾಗಿ ಹೇಳಿರುವ ಇಸ್ರೋ ಅಧ್ಯಕ್ಷ ಕೆ ಶಿವನ್, ಗಗನಯಾನಕ್ಕೂ ಸಿದ್ಧತೆ ನಡೆಸುವುದಾಗಿ ಹೇಳಿದ್ದಾರೆ.

2022 ರ ವೇಳೆಗೆ ಉದ್ದೇಶಿತ ಗಗನಯಾತ್ರೆ ಕೈಗೊಳ್ಳಲು ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಉದ್ದೇಶಿತ ಗಗನ ಯಾತ್ರೆಗೆ ಈ ವರ್ಷದಿಂದಲೇ ತಯಾರಿ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ