ದೇಶದಾದ್ಯಂತ ಇಂದು ಕಾಂಗ್ರೆಸ್ ಸಂವಿಧಾನ ಉಳಿಸಿ ಅಭಿಯಾನ

ಶನಿವಾರ, 28 ಡಿಸೆಂಬರ್ 2019 (08:51 IST)
ನವದೆಹಲಿ: ಪೌರತ್ವ ಖಾಯಿದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಇಂದು ದೇಶದಾದ್ಯಂತ ಸಂವಿಧಾನ ಉಳಿಸಿ ಅಭಿಯಾನ ಕೈಗೊಳ್ಳಲಿದೆ.


‘ಸಂವಿಧಾ ಉಳಿಸಿ-ಭಾರತ ರಕ್ಷಿಸಿ’ ಅಭಿಯಾನದ ಅಂಗವಾಗಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸ್ಸಾಂಗೆ ಭೇಟಿ ನೀಡಿ ಪೌರತ್ವ ಖಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂವಿಧಾನ ಉಳಿಸಿ ಅಭಿಯಾನಕ್ಕೆ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಚಾಲನೆ ನೀಡಲಿದ್ದಾರೆ. ಈ ವೇಳೆ ಪ್ರಮುಖ ಕಾಂಗ್ರೆಸ್ ನಾಯಕರು ಸೋನಿಯಾಗೆ ಸಾಥ್ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ