ಶುಕ್ರಯಾನಕ್ಕೆ ISRO ಸಜ್ಜು !

ಶುಕ್ರವಾರ, 6 ಮೇ 2022 (07:46 IST)
ನವದೆಹಲಿ : ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶುಕ್ರಯಾನಕ್ಕೆ ಸಜ್ಜಾಗಿದೆ.

ಎಲ್ಲವೂ ಅಂದುಕೊಂಡಂತೆ ಆದರೆ, 2024ರ ವೇಳೆಗೆ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದು ಹಾರಲಿದೆ. ತಪ್ಪಿದರೆ, 2031ಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ. ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರಗ್ರಹವಿದೆ.

ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೊ? ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿ ಅಧ್ಯಯನ ಕೈಗೊಂಡಿದೆ. ಅಲ್ಲೂ ಮನುಷ್ಯರು ವಾಸಿಸಲು ಯೋಗ್ಯವೇ ಇಲ್ಲವೇ ಎಂಬ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. 

ಹಲವು ವರ್ಷಗಳ ಸಿದ್ಧತೆ

ಹಲವು ವರ್ಷಗಳಿಂದ ಸಿದ್ಧತೆ ಪ್ರಾರಂಭಿಸಿದ್ದ ಇಸ್ರೋ ಶುಕ್ರಯಾನದ ಮಹತ್ವದ ಯೋಜನೆ ಈಗ ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಧ್ಯಕ್ಷತೆಯಲ್ಲಿ ಶುಕ್ರಗ್ರಹ ಅಧ್ಯಯನ ತಂಡದ ವಿಜ್ಞಾನಿಗಳ ಜೊತೆ ಇತ್ತೀಚೆಗೆ ಸಭೆ ನಡೆದಿತ್ತು.

ಸಭೆಯ ನಂತರ ಸೋಮನಾಥ್, ಈ ನಿರ್ಧಾರ ಪ್ರಕಟಿಸಿದ್ದರು. ಶುಕ್ರಯಾನಕ್ಕೆ ಹಣ ನಿಗದಿಪಡಿಸಿದ್ದು, ಸಾಕಷ್ಟು ಕಡಿಮೆ ಸಮಯದಲ್ಲಿ ಶುಕ್ರಯಾನ ನೌಕೆಯನ್ನು ಸಿದ್ಧಪಡಿಸುವ ಶಕ್ತಿ ನಮಗಿದೆ ಎಂದು ಹೇಳಿದ್ದರು. 

ನೌಕೆ ಉಡಾವಣೆ ಯಾವಾಗ?

2024ರ ಡಿಸೆಂಬರ್ನಲ್ಲಿ ಶುಕ್ರಗ್ರಹವು ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆಯನ್ನು ಶುಕ್ರಗ್ರಹದ ಕಕ್ಷೆಗೆ ತಳ್ಳುವುದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೆ? ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು.

2024ನ್ನು ಬಿಟ್ಟರೆ ಮುಂದೆ 2031ರಲ್ಲಿ ಅಂತಹ ಅವಕಾಶ ಸಿಗುತ್ತದೆ ಎಂದು ಹೇಳಿರುವ ಇಸ್ರೋ 2024ರಲ್ಲೇ ಶುಕ್ರಯಾನ ಕೈಗೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ