ಮುಂದುವರಿದ ಪಾಕಿಗಳ ಅಟ್ಟಹಾಸ, 2 ಕಂದಮ್ಮಗಳ ಜೊತೆ 8 ಮಂದಿ ಸಾವು

ಬುಧವಾರ, 2 ನವೆಂಬರ್ 2016 (10:19 IST)
ಜಮ್ಮು: ಪಾಕ್ ಉಗ್ರರ ಜೊತೆಗೆ ಅಲ್ಲಿಯ ಸೈನಿಕರ ಅಟ್ಟಹಾಸವೂ ಎಲ್ಲೆ ಮೀರುತ್ತಿದೆ. ಗಡಿ ಪ್ರದೇಶವಾದ ಸಾಂಬಾ, ರಜೋರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು, ನಾಲ್ಕು ಮಹಿಳೆ ಸಹಿತ ಎಂಟುನಾಗರಿಕರು ಸಾವಿಗೀಡಾಗಿದ್ದಾರೆ. 22  ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ನಸುಕಿನ ಜಾವ ಜಮ್ಮು ಮತ್ತು ಸಾಂಬಾ ಜಿಲ್ಲೆಯ ರಾಮ‌ಗರ್‌ ಮತ್ತು ಅನಿರ್ ಪ್ರದೇಶದಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಇಬ್ಬರು ಅಪ್ರಾಪ್ತರು ಹಾಗೂ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ. ಅದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಬಾರಿ ಪಾಕಿ ಸೈನಿಕರು ಜನವಸತಿ ಪ್ರದೇಶವನ್ನೇ ಟಾರ್ಗೆಟ್ ಮಾಡಿಕೊಂಡಿದೆ. ಈ ದಾಳಿಗೆ ಭಾರತೀಯ ಸೇನೆ ಕೂಡಾ ದಿಟ್ಟ ಪ್ರತ್ಯುತ್ತರ ನೀಡಿದ್ದು, ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿದ್ದ ಪಾಕಿಸ್ತಾನದವ14 ಗಡಿ ಠಾಣೆಗಳನ್ನು ಧ್ವಂಸಗೊಳಿಸಿದೆ. ಅಲ್ಲದೆ ಇಬ್ಬರು ಪಾಕ್ ಸೈನಿಕರು ಬಲಿಯಾಗಿದ್ದಾರೆ.
 
ಪಾಕಿಸ್ತಾನದ ಶೆಲ್ ದಾಳಿ ಹಿನ್ನೆಲೆಯಲ್ಲಿ ಜಮ್ಮುವಿನ ಗಡಿ ಪ್ರದೇಶದಲ್ಲಿರುವ 174 ಶಾಲೆಗಳನ್ನು ಮುಂದಿನ ಆದೇಶ ಬರುವವರೆಗೂ ಮುಚ್ಚಲು ಸೂಚನೆ ನೀಡಲಾಗಿದೆ. ಭಯಭೀತರಾದ ಗಡಿ ಗ್ರಾಮಸ್ಥರು ಮನೆ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಪಾಕಿಸ್ತಾನದವುಪಟಳ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ನಿನ್ನೆವುನ್ನತ ಮಟ್ಟದ ಸಭೆ ಕರೆದು ಚರ್ಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ