ಹೆಂಡತಿ ಬರ್ತ್ ಡೇ ತಪ್ಪಿಸಿದರೆ ಇಲ್ಲಿ ಜೈಲೇ ಗತಿ!

ಮಂಗಳವಾರ, 23 ನವೆಂಬರ್ 2021 (08:48 IST)
ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವುದು ರೂಢಿಯಲ್ಲಿಸರಿಯಾದ ಸಲಹೆ ಇರಬಹುದು.
ಆದರೆ, ಹೆಂಡತಿ ಜಗಳಗಂಟಿಯಾಗಿದ್ದರೂ ಅದನ್ನು ಲೆಕ್ಕಿಸದೆ ಆಕೆಯ ಹುಟ್ಟುಹಬ್ಬವನ್ನು ಸಂಭ್ರಮಿಸಬೇಕು ಎಂದು ಗಂಡನಿಗೆ ಕಟ್ಟಾಜ್ಞೆ ವಿಧಿಸುವುದು ಎಷ್ಟು ಸರಿ? ಅದು ಸರಿಯೋ ತಪ್ಪೊ, ಆದರೆ ಪೆಸಿಫಿಕ್ ಮಹಾಸಾಗರದ ಪಾಲಿನೇಷನ್ ಪ್ರದೇಶದ ಸಮೋವಾ ದ್ವೀಪದಲ್ಲಿ ಮಾತ್ರ ಅಂತಹದ್ದೊಂದು ಕಡ್ಡಾಯ ನಿಯಮ ಇದೆ.
ಪ್ರತಿ ವರ್ಷ ಹೆಂಡತಿಯ ಹುಟ್ಟುಹಬ್ಬವನ್ನು ಗಂಡನಾದವನು ಆಚರಿಸಲೇಬೇಕು ಎನ್ನುವು ಕಾನೂನು ಇದೆ. ಒಂದು ವೇಳೆ ಉದಾಸೀನ ತೋರಿದರೆ ಜೈಲು ಶಿಕ್ಷೆ ಗ್ಯಾರಂಟಿ! ಈ ರಾಷ್ಟ್ರದಲ್ಲಿ ಗಂಡನ ಬರ್ತ್ ಡೇ ಇದ್ದರೆ ಹೆಂಡತಿಯಾದವಳು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕೈಯಲ್ಲಿ ಕಾಸಿದ್ದರೆ ಬಡಪಾಯಿ ಗಂಡನ ಹುಟ್ಟುಹಬ್ಬಕ್ಕೆ ಒಬ್ಬಟ್ಟು ತಟ್ಟಿ ಸಂಭ್ರ-ಮಿಸಬಹುದು. ಇಲ್ಲ ಅಂದರೆ, ಒಣರೊಟ್ಟಿ ತಿಂದು ಮಲಗಬಹುದು. ಆದರೆ ಹೆಂಡತಿಯ ಬರ್ತ್ ಡೇ ಇದ್ದರೆ ಮಾತ್ರ ಪತಿರಾಯ ಮೈಮರೆಯುವಂತಿಲ್ಲ. ಸಂಭ್ರಮಾಚರಣೆ ಕಡ್ಡಾಯ. ಕೈಯಲ್ಲಿ ಕಾಸಿಲ್ಲ, ಆಚರಣೆಗೆ ಸಮಯ ಇಲ್ಲ ಎಂದು ಸಬೂಬು ಹೇಳುವಂತಿಲ್ಲ.
ಹೆಂಡತಿ ಹೇಳಿದ ರೀತಿ ಸಂಭ್ರಮದಿಂದ ಆಕೆಯ ಹುಟ್ಟುಹಬ್ಬ ಆಚರಿಸಲೇ ಬೇಕು. ''ಅಯ್ಯೋ ಮರೆತೆ ಮಾರಾಯ್ತಿ,'' ಎಂದು ನೆಪ ಹೇಳುವಂತಿಲ್ಲ. ''ದುಡ್ಡಿಲ್ಲ ಸುಮ್ಕಿರು,'' ಎಂದು ಗದರಿಸಿ ಸುಮ್ಮನಿರಿಸುವಂತೆಯೂ ಇಲ್ಲ. ಹಾಗೇನಾದರೂ ಉದಾಸೀನ ಮಾಡಿ ಹೆಂಡತಿಯ ಕೆಂಗಣ್ಣಿಗೆ ಗುರಿಯಾದರೆ ಪತಿರಾಯನಿಗೆ ಜೈಲೇ ಗತಿ. ಆದರೂ ಸಮೋವೊ ಕಾನೂನಿನಲ್ಲಿ ಸಣ್ಣದೊಂದು ರಿಯಾಯಿತಿಯೂ ಇದೆ. ಮೊದಲ ಬಾರಿ ಅಂತದ್ದೊಂದು ತಪ್ಪೆಸಗುವ ಪತಿಗೆ ಪೊಲೀಸರು ಬುದ್ಧಿ ಹೇಳಿ ಕಳಿಸಲು ಅವಕಾಶವಿದೆ.
''ಇನ್ನೊಮ್ಮೆ ಆ ರೀತಿ ಮಾಡಬೇಡ ಮಾರಾಯ,'' ಎಂದು ಪೊಲೀ-ಸರು ಹೇಳಿ ಕಳಿಸಿದರೆಂದರೆ ಆತನ 'ಲೈಫ್ ಲೈನ್' ಮುಗಿಯಿತು ಎಂದು ಅರ್ಥ. ಮಾರನೇ ವರ್ಷ ಅದೇ ತಪ್ಪು ಮಾಡಿದರೆ ಪೊಲೀಸರಿಂದಲೂ ಆತನನ್ನು ರಕ್ಷಿಸಲು ಸಾಧ್ಯವಿಲ್ಲ. ಜೈಲು ಕಾಯಂ. ಜಗತ್ತಿನ ವಿವಿಧ ದೇಶಗಳಲ್ಲಿಇಂತಹ ತರಹೇವಾರಿ ವಿಚಿತ್ರ ಕಾನೂನುಗಳು ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ