ಶ್ರೀನಗರ : ಉತ್ತರ ಕಾಶ್ಮೀರದ ಸೋಪುರ್ ಪ್ರಾಂತ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಸೇನಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಯಿದ್ದೀನ್ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ತಿಳಿದುಬಂದಿದೆ.
ಮನೆಯೊಂದರಲ್ಲಿ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಡಗಿ ಕುಳಿತಿದ್ದ ಉಗ್ರರನ್ನು ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿ ಹೊಡೆದುರುಳಿಸಿದೆ.
ಹತ ಉಗ್ರರ ಬಳಿಯಿದ್ದ 2 ಎಕೆ 47 ಸೇರಿದಂತೆ 5 ಮ್ಯಾಗಜೀನ್‌ಗಳು ,107 ಲೈವ್ ರೌಂಡ್‌ಗಳು ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.