ರಾಂಚಿ: ನೂತನವಾಗಿ ಅಧಿಕಾರಕ್ಕೇರಿದ ಜಾರ್ಖಂಡ್ ಸಿಎಂ ಚಂಪಯಿ ಸೊರೇನ್ ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತ ಗೆದ್ದಿದ್ದಾರೆ. ಚಂಪಯಿ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ವಿಶ್ವಾಸ ಮತ ಯಾಚನೆ ವೇಳೆ ಬಹುಮತ ಸಾಬೀತುಪಡಿಸಿದೆ.
ಆಡಳಿತಾರೂಢ ಸರ್ಕಾರದ ಪರ ಒಟ್ಟು 47 ಮತಗಳು ಬಂದಿದ್ದವು. 81 ಸದಸ್ಯ ಬಲವಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತಕ್ಕೆ 41 ಸದಸ್ಯರ ಬೆಂಬಲ ಬೇಕಾಗಿತ್ತು. 29 ಸದಸ್ಯರು ಬಿಜೆಪಿ ಮತ್ತು ಮಿತ್ರ ಪಕ್ಷದ ಪರವಾಗಿ ಮತ ಹಾಕಿದ್ದರು. ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಚಂಪಯಿ ಸೊರೇನ್ ನೇತೃತ್ವದ ಸರ್ಕಾರ ಕುರ್ಚಿ ಭದ್ರಪಡಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಇತ್ತೀಚೆಗಷ್ಟೇ ಅಕ್ರಮ ಭೂ ಕಬಳಿಕೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಸಿಎಂ ಹೇಮಂತ್ ಸೊರೇನ್ ರನ್ನು ಅರೆಸ್ಟ್ ಮಾಡಿತ್ತು. ಇದಾದ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಚಂಪಯಿ ನೂತನ ಸಿಎಂ ಆಗಿ ಅಧಿಕಾರಕ್ಕೇರಿದ್ದರು. ಅವರಿಗೆ ವಿಶ್ವಾಸ ಮತ ಸಾಬೀತುಪಡಿಸಲು 10 ದಿನಗಳ ಗಡುವು ನೀಡಲಾಗಿತ್ತು.
ಶಾಸಕರ ಖರೀದಿ ಸಂಭವಿರುವುದರಿಂದ ಹೈದರಾಬಾದ್ ನಲ್ಲಿರಿಸಲಾಗಿತ್ತು. ಇಂದಷ್ಟೇ ಜೆಎಂಎಂ ಸದಸ್ಯರು ಸದನಕ್ಕೆ ಹಾಜರಾಗಿದ್ದರು.