ಮಲ್ಲಿಕಾರ್ಜುನ ಖರ್ಗೆ ಭಾಷಣದ ವೇಳೆ ನಿದ್ರೆ ಹೋದ ದಿಗ್ವಿಜಯ್ ಸಿಂಗ್
ಫೆಬ್ರವರಿ 2 ರಂದು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ವೇಳೆ ಖರ್ಗೆ ಕೆಲವೊಂದು ಎಡವಟ್ಟು ಮಾಡಿಕೊಂಡಿದ್ದರು. ಬಿಜೆಪಿ ಮುಂದಿನ ಚುನಾವಣೆಯಲ್ಲಿ 400 ಸೀಟುಗಳಿಗಿಂತಲೂ ಹೆಚ್ಚು ಗೆಲ್ಲಲಿದೆ ಎಂದು ಬಿಜೆಪಿಯವರನ್ನು ನಗೆಗಡಲಲ್ಲಿ ತೇಲಿಸಿದ್ದರು. ಬಳಿಕ ರಾಜೀವ್ ಗಾಂಧಿ ಎನ್ನುವ ಬದಲು ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮುಜುಗರಕ್ಕೀಡಾಗಿದ್ದರು.