17 ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂಬದನ್ನು ಪತ್ತೆ ಮಾಡಲು ಜ್ಞಾನವಾಪಿ ಮಸೀದಿಯ ಮೂರು ಗುಮ್ಮಟಗಳ ಅಡಿಯಲ್ಲಿರುವ ಪ್ರದೇಶದ ವೈಜ್ಞಾನಿಕ ಪರೀಕ್ಷೆಗಳನ್ನು ಭಾನುವಾರ ನಡೆಸಲಾಯಿತು.
ನೆಲಮಾಳಿಗೆಗಳ ಶುಚಿಗೊಳಿಸುವಿಕೆಯೊಂದಿಗೆ ಛಾಯಾಗ್ರಹಣ, ಮ್ಯಾಪಿಂಗ್ ಮತ್ತು ಪ್ರದೇಶದ ಅಳತೆ ಪೂರ್ಣಗೊಂಡಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದರು. ಆದರೆ ನ್ಯಾಯಂಗ ತೀರ್ಪಿನ ಪ್ರಕಾರ ಅಲ್ಲಿ ಸಮೀಕ್ಷೆ ನಡೆಯುತ್ತಿಲ್ಲ, ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಆರೋಪಿಸಿದ್ದರು.
ಇದೀಗ ನ್ಯಾಯಾಲಯದ ಆದೇಶದ ಪ್ರಕಾರ ಪ್ರಾಥಮಿಕ ಹಂತದ ಸಮೀಕ್ಷೆ ಮುಗಿದಿದ್ದು , ರಾಡಾರ್ ಸೇರಿದಂತೆ ಆಧುನೀಕ ಯಂತ್ರಗಳನ್ನು ಬಳಸಿ ದ್ವಿತೀಯ ಹಂತದ ಸಮೀಕ್ಷೆ ಪ್ರಾರಂಭವಾಗಿದೆ.
ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಡಿಜಿಪಿಎಸ್) ಮತ್ತು ಇತರ ತಂತ್ರಗಳನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ವಕೀಲ ಸುಧೀರ್ ತ್ರಿಪಾಠಿ ಅವರು ಶನಿವಾರ ಹೇಳಿದರು. ಇಲ್ಲಿಯವರೆಗಿನ ಸಮೀಕ್ಷೆಯಿಂದ ಹಿಂದೂಗಳು ತೃಪ್ತರಾಗಿದ್ದಾರೆ ಎಂದು ಅವರು ಹೇಳಿದರು.