ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೇ ಕೊರೋನಾ ಪಾಸಿಟಿವ್

ಗುರುವಾರ, 13 ಮೇ 2021 (09:25 IST)
ನವದೆಹಲಿ: ಕೊರೋನಾ ಯಾರನ್ನೂ ಬಿಟ್ಟಿಲ್ಲ. ಇದೀಗ ಸುಪ್ರೀಂಕೋರ್ಟ್  ನ್ಯಾಯಮೂರ್ತಿ ಚಂದ್ರಚೂಡ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.


ಇದರಿಂದಾಗಿ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ಕಲಾಪಗಳು ಮುಂದೂಡಿಕೆಯಾಗಲಿವೆ. ನ್ಯಾಯಮೂರ್ತಿ ಚಂದ್ರಚೂಡ್ ಜೊತೆಗೆ ಇನ್ನೊಬ್ಬ ಸಿಬ್ಬಂದಿಗೂ ಕೊರೋನಾ ದೃಢಪಟ್ಟಿದೆ.

ವಿಶೇಷವೆಂದರೆ ದೇಶದಲ್ಲಿ ಕೊರೋನಾ ಕುರಿತ ವಿವಿಧ ಅಹವಾಲುಗಳನ್ನು ನ್ಯಾ. ಚಂದ್ರಚೂಡ್ ವಿಚಾರಣೆ ನಡೆಸುತ್ತಿದ್ದರು. ಇಂದೂ ಕೂಡಾ ಅವರು ಮಹತ್ವದ ವಿಚಾರಣೆಯೊಂದನ್ನು ನಡೆಸಬೇಕಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಇದು ಒಂದು ದಿನ ಮುಂದೂಡಿಕೆಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ