ತ್ರಿವಳಿ ತಲಾಖ್: ಮೊದಲು ಸಿಂಧು, ನಂತರ ರದ್ದತಿ! ಏಕೀ ಗೊಂದಲ?

ಮಂಗಳವಾರ, 22 ಆಗಸ್ಟ್ 2017 (11:29 IST)
ನವದೆಹಲಿ: ತ್ರಿವಳಿ ತಲಾಖ್ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ನೀಡುವಾಗ ಮೊದಲು ತಲಾಖ್ ಅಮಾನ್ಯಗೊಳಿಸಿರಲಿಲ್ಲ. ಆದರೆ  ನಂತರ ರದ್ದುಗೊಳಿಸಿರುವ ತೀರ್ಪು ಹೊರಬಂತು. ಯಾಕೆ ಈ ಗೊಂದಲ?

 
ಮೊದಲು ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ತಮ್ಮ ತೀರ್ಪು ಓದಿದ್ದರು. ನಂತರ ಪಂಚ ಸದಸ್ಯ ಪೀಠದಲ್ಲಿದ್ದ ಇತರ ನ್ಯಾಯಾಧೀಶರು ತಮ್ಮ ತೀರ್ಪು ಕೊಟ್ಟರು. ನಿಯಮದ ಪ್ರಕಾರ ಬಹುಸದಸ್ಯರ ನ್ಯಾಯಪೀಠ ತೀರ್ಪು ನೀಡುವ ಸಂದರ್ಭದಲ್ಲಿ ಯಾವುದರ ಪರ ಹೆಚ್ಚು ಮಂದಿ ನ್ಯಾಯಾಧೀಶರು ತೀರ್ಪು ನೀಡುತ್ತಾರೋ ಅದೇ ತೀರ್ಪು ಮಾನ್ಯವಾಗುತ್ತದೆ.

ತ್ರಿವಳಿ ತಲಾಖ್ ವಿಚಾರದಲ್ಲೂ ಹಾಗೇ ಆಗಿದೆ. ಒಟ್ಟು ಐವರು ನ್ಯಾಯಾಧೀಶರ ಪೈಕಿ ಮೂವರು ತಲಾಖ್ ರದ್ದುಗೊಳಿಸಬೇಕೆಂದು ತಮ್ಮ ತೀರ್ಮಾನ ತಿಳಿಸಿದ್ದರಿಂದ ಬಹುಮತದ ಆಧಾರದಲ್ಲಿ ಇದೇ ತೀರ್ಪು ಮಾನ್ಯವಾಗಿದೆ.

ಇದನ್ನೂ ಓದಿ.. ತ್ರಿವಳಿ ತಲಾಖ್ ರದ್ದುಗೊಳಿಸಿದ ಬಹುಮತದ ತೀರ್ಪು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ