ಭೂಲೋಕದ ಸ್ವರ್ಗ ಕಾಶ್ಮೀರ ಈಗ ಪ್ರವಾಸಿಗಳಿಗೆ ಮುಕ್ತ

ಗುರುವಾರ, 10 ಅಕ್ಟೋಬರ್ 2019 (09:55 IST)
ನವದೆಹಲಿ: ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಯಾವುದೇ ಅನಾಹುತಗಳಾಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಅದನ್ನೀಗ ಮುಕ್ತಗೊಳಿಸಲಾಗಿದೆ.


ಇನ್ನು ಮುಂದೆ ಕಾಶ್ಮೀರ ಪ್ರವಾಸಕ್ಕೆ ಮುಕ್ತವಾಗಲಿದೆ. ಉಗ್ರರ ದಾಳಿ ಬೆದರಿಕೆ ಮತ್ತು ಆರ್ಟಿಕಲ್ 370 ರದ್ದು ಮಾಡಿದ ಹಿನ್ನಲೆಯಲ್ಲಿ ಅಮರನಾಥ ಯಾತ್ರಿಗಳು ಸೇರಿದಂತೆ ಕಾಶ್ಮೀರ ಯಾತ್ರಾರ್ಥಿಗಳಿಗೆ ನಿರ್ಬಂಧ ಹೇರಲಾಗಿತ್ತು.

ಇದೀಗ ನಿರ್ಬಂಧ ತೆರವುಗೊಳಿಸಲಾಗಿದ್ದು, ಪ್ರವಾಸಿಗಳು ಮಾತ್ರವಲ್ಲದೆ, ಸ್ಥಳೀಯ ಕಾಲೇಜು, ಶಿಕ್ಷಣ ಸಂಸ್ಥೆಗಳನ್ನೂ ಮತ್ತೆ ತೆರೆಯಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ