ದೆಹಲಿ ಆಡಳಿತದ ಮುಖ್ಯಸ್ಥರು ಯಾರು ..? ಸುಪ್ರೀಂ ಮೆಟ್ಟಿಲೇರಿದ ಕೇಜ್ರಿವಾಲ್
ಗುರುವಾರ, 23 ಫೆಬ್ರವರಿ 2017 (12:40 IST)
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಗುದ್ದಾಟ ಸುಪ್ರೀಂಕೋರ್ಟ್ ಅಂಗಳ ತಲುಪಿದೆ. ದೆಹಲಿ ಹೈಕೋರ್ಟ್ ತೀರ್ಪನ್ನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಸುಪ್ರೀಂಕೋರ್ಟ್`ನಲ್ಲಿ ಅರ್ಜಿ ಸಲ್ಲಿಸಿದೆ. ಸಂವಿಧಾನ ಪೀಠ ರಚಿಸಿ ರಾಷ್ಟ್ರ ರಾಜಧಾನಿ ವ್ವ್ಯಾಪ್ತಿಯ ಸರ್ಕಾರ(ಜಿಎನ್`ಸಿಟಿ)ಕ್ಕೆ ಯಾರು ಮುಖ್ಯಸ್ಥ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ದೆಹಲಿಯ ಆಡಳಿತದ ಮುಖ್ಯಸ್ಥ ಎಂದು ಕಳೆದ ವರ್ಷ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನ ಆಮ್ ಆದ್ಮಿ ಸರ್ಕಾರ ಸುಪ್ರೀಂಕೋರ್ಟ್`ನಲ್ಲಿ ಪ್ರಶ್ನಿಸಿದೆ.
ಸಾರ್ವಜನಿಕ ಆದೇಶಗಳು, ಲ್ಯಾಂಡ್, ಪೊಲೀಸ್ ಮತ್ತು ಸೇವೆಗಳು, ಸಿವಿಲ್ ಸೇವೆಗಳಿಗೆ ಭರ್ತಿ ಅಧಿಕಾರ ಲೆಫ್ಟಿನೆಂಟ್ ಗವರ್ನರ್`ಗೆ ಸೇರಿದ್ದು ಎಂದು ಕಳೆದ ಆಗಸ್ಟ್`ನಲ್ಲಿ ದೆಹಲಿ ಹೈಕೋರ್ಟ್ ಹೇಳಿತ್ತು.