ಮುತ್ತು ಕೊಟ್ಟು ರೋಗ ಗುಣಪಡಿಸುತ್ತಿದ್ದ ಕಿಸ್ಸಿಂಗ್ ಬಾಬಾ ಬಗ್ಗೆ ಕೇಳಿದ್ದೀರಾ?
ರಾಮ್ ಪ್ರಕಾಶ್ ಚೌಹಾನ್ ಅಲಿಯಾಸ್ ಚಮತ್ಕಾರಿ ಬಾಬಾ ತಾನು ಮಹಿಳೆಯರ ಸಮಸ್ಯೆ ಬಗೆ ಹರಿಸುವುದಾಗಿ ಸೋಗು ಹಾಕಿ ಅವರನ್ನು ತಬ್ಬಿ, ಮುತ್ತು ಕೊಡುತ್ತಿದ್ದ. ಇದು ಚಮತ್ಕಾರಿ ಚುಂಬನ ಎಂದೂ ನಂಬಿಸುತ್ತಿದ್ದ.
ತನಗೆ ಭಗವಾನ್ ವಿಷ್ಣುವಿನ ಪ್ರೇರಣೆಯಿಂದ ಈ ಶಕ್ತಿ ಪ್ರಾಪ್ತಿಯಾಗಿದೆ ಎಂದು ಆತ ಮಹಿಳೆಯರ ಜತೆ ಚೆಲ್ಲಾಟವಾಡುತ್ತಿದ್ದ. ಈತ ತನ್ನ ಮನೆಯಲ್ಲಿ ಕೋಣೆಯೊಂದನ್ನು ಈ ರೀತಿ ‘ಚಿಕಿತ್ಸೆ’ಗಾಗಿಯೇ ಮೀಸಲಿಟ್ಟಿದ್ದನಂತೆ. ಈತನ ಕೃತ್ಯಕ್ಕೆ ಈತನ ತಾಯಿಯೇ ಬೆಂಬಲವಾಗಿದ್ದಳಂತೆ! ಈಗ ಈಕೆಯನ್ನೂ ತನಿಖೆಗೊಳಪಡಿಸಲಾಗುತ್ತಿದೆ.